ಓಜನಹಳ್ಳಿಯಲ್ಲಿ ಅಂಗವಿಕಲರ ಸಮನ್ವಯ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ, ಕಾರ್ಯದರ್ಶಿ ಆದಯ್ಯ ಹೇರೂರು, ಕಾಯಕ ಮಿತ್ರ ಮಾಮೂಬೀ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮಲ್ಲಿಕಾರ್ಜುನ ಪೂಜಾರ, ಸಿದ್ದಲಿಂಗಮ್ಮ ಹಾಲಗುಂಡಿ ಇತರರಿದ್ದರು. 
ಕೊಪ್ಪಳ

ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲರು
  • ಸಮನ್ವಯ ಗ್ರಾಮ ಸಭೆ

ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಅಳವಂಡಿ: ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಿ ಎಂದು ಕರ್ನಾಟಕ ಅಂಗವಿಕಲರ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂಡಿ ತಿಳಿಸಿದರು.
ಸಮೀಪದ ಓಜನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ, ಗ್ರಾಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಗವಿಕಲರ ಸಮನ್ವಯ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರ್ಕಾರಿ ಯೋಜನೆಗಳಾದ ಸಲಕರಣೆ ವಿತರಣೆ, ಯಂತ್ರ ಚಾಲಿತ ವಾಹನ ವಿತರಣೆ, ಶಿಶು ಪಾಲನೆ, ಅಂಗವಿಕಲರ ವಿವಾಹಕ್ಕೆ ಪ್ರೋತ್ಸಾಹ ಧನ, ದೃಷ್ಟಿ ದೋಷ ಅಂಗವಿಕಲರಿಗೆ ಲ್ಯಾಪ್‌ಟಾಪ್, ಬ್ರೈನ್ ಕಿಟ್ ಯೋಜನೆ, ಸಾಧನೆ, ಪ್ರತಿಭೆ ಯೋಜನೆ, ಆಧಾರ್ ಯೋಜನೆ, ಶ್ರವಣದೋಷ ಉಳ್ಳವರಿಗೆ ಹೊಲಿಗೆ ಯಂತ್ರ ವಿತರಣೆ, ವಿವಿಧ ಸಂಘ ಸಂಸ್ಥೆಗಳು ಅಂಗವಿಕಲರ ಏಳಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸಬಲರಾಗಬೇಕು ಎಂದರು. ಪಿಡಿಒ ಶಿವಬಸಪ್ಪ ಹಂಚಿನಾಳ ಮಾತನಾಡಿ, ಗ್ರಾಪಂ, ವಸತಿ ಯೋಜನೆ, ಗ್ರಾಮ ಸಭೆ ಮಹತ್ವ, ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ, ಕಾರ್ಯದರ್ಶಿ ಆದಯ್ಯ ಹೇರೂರು, ಕಾಯಕ ಮಿತ್ರ ಮಾಮೂಬೀ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮಲ್ಲಿಕಾರ್ಜುನ ಪೂಜಾರ, ಸಿದ್ದಲಿಂಗಮ್ಮ ಹಾಲಗುಂಡಿ, ನಿಂಗಪ್ಪ ಕುರಿ, ಭರಮಪ್ಪ ಗುತ್ತೂರ, ತಿಮ್ಮಣ್ಣ ಮುಂಡರಗಿ, ಶರಣಪ್ಪ ವನಬಳ್ಳಾರಿ, ವೀರೇಶ ಹಾಲಗುಂಡಿ ಇತರರಿದ್ದರು.