ಯಲಬುರ್ಗಾ ತಾಲೂಕಿನ ಗುನ್ನಾಳ ಹೊರವಲಯದಲ್ಲಿ ಡಿಎಸ್‌ಎಸ್ ಸಂಘಟನೆ ಪದಾಧಿಕಾರಿಗಳು ಧರಣಿ ನಡೆಸಿದರು. ಪ್ರಮುಖರಾದ ಪಂಪಣ್ಣ ಲಿಂಗದಹಳ್ಳಿ, ಮಹದೇವ ಹರಿಜನ, ಬಸವರಾಜ ಹಿರೇಬೊಮ್ಮನಾಳ, ಹನಮಂತಪ್ಪ ಅಂಗಡಿ, ಗುಂಡಪ್ಪ ಅಂಗಡಿ, ಹಿರೇಗುಂಡಪ್ಪ, ಗಿರಿಜಮ್ಮ ಹಟ್ಟ, ಹನಮಂತಪ್ಪ ಕವಳಕೇರಿ ಇತರರಿದ್ದರು. 
ಕೊಪ್ಪಳ

ರೈತರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ದಸಂಸ ಪದಾಧಿಕಾರಿಗಳಿಂದ ಧರಣಿ
  • ಕಲಬುರಗಿ ವಿಭಾಗದ ಸಂಚಾಲಕ ಪುಟ್ಟರಾಜ ಪೂಜಾರ ಆಗ್ರಹ
ಯಲಬುರ್ಗಾ: ವಿವಿಧ ವಿದ್ಯುತ್ ಉತ್ಪಾದನಾ ಘಟಕಗಳ ಸಿಬ್ಬಂದಿ-ಅಧಿಕಾರಿಗಳ ದೌರ್ಜನ್ಯ ಹಾಗೂ ಅಕ್ರಮ ಚಟುವಟಿಕೆ ವಿರುದ್ಧ ದಸಂಸ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ತಾಲೂಕಿನ ಗುನ್ನಾಳ ಹೊರವಲಯದಲ್ಲಿ ಮಂಗಳವಾರ ಧರಣಿ ನಡೆಸಿದರು.
ಕಲಬುರಗಿ ವಿಭಾಗದ ಸಂಚಾಲಕ ಪುಟ್ಟರಾಜ ಪೂಜಾರ ಮಾತನಾಡಿ, ಗುನ್ನಾಳ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ನಾನಾ ಕಂಪನಿಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅವರ ಬೆಂಬಲಿಗರು ರೈತರ ಮೇಲೆ ದೌರ್ಜನ್ಯ ಎಸಗು ತ್ತಿದ್ದಾರೆ. ಗೂಂಡಾಗಳನ್ನು ಬಿಟ್ಟು ಹಲ್ಲೆಗೆ ಮುಂದಾಗುತ್ತಿದ್ದಾರೆ. ವಶಪಡಿಸಿಕೊಂಡ ಜಮೀನಿಗೆ ಸರಿಯಾದ ಪರಿಹಾರ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಜಮೀನಿನ ಮಾಲೀಕರು ಜಮೀನಿನೊಳಗೆ ಪ್ರವೇಶಿಸುವುದನ್ನು ನಿರಾಕರಿಸಿ, ಒಳಗೆ ಹೋಗಲು ಯತ್ನಿಸಿದರೆ ಹಲ್ಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವಚ್ಯಾ ಶಬ್ದಗಳಿಂದ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ. ಅನ್ಯಾಯಕ್ಕೆ ಒಳಗಾಗುತ್ತಿರುವ ರೈತರಿಗೆ ರಕ್ಷಣೆ ಹಾಗೂ ಸೂಕ್ತ ಪರಿಹಾರ ಕಲ್ಪಿಸಿ, ಹಲ್ಲೆಗೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಯಮನೂರಪ್ಪ ಎಸ್.ಪಿ.ಗುನ್ನಾಳ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ಉತ್ಪಾದನಾ ಕಂಪನಿಗಳ ಹೆಸರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ಪಂಪಣ್ಣ ಲಿಂಗದಹಳ್ಳಿ, ಮಹದೇವ ಹರಿಜನ, ಬಸವರಾಜ ಹಿರೇಬೊಮ್ಮನಾಳ, ಹನಮಂತಪ್ಪ ಅಂಗಡಿ, ಗುಂಡಪ್ಪ ಅಂಗಡಿ, ಹಿರೇಗುಂಡಪ್ಪ, ಗಿರಿಜಮ್ಮ ಹಟ್ಟ, ಹನಮಂತಪ್ಪ ಕವಳಕೇರಿ ಇತರರಿದ್ದರು.