ಹುಲಿಹೈದರ ಗ್ರಾಮಸ್ಥ ಸೋಮನಾಥ ಗದ್ದಿ ಕನಕಗಿರಿ ತಾಲೂಕಿನ ಗೋಡಿನಾಳ ಸೀಮಾದ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿರುವುದನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿ ಪತ್ರ. 
ಕೊಪ್ಪಳ

ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ನಕಲಿ ದಾಖಲೆ ಸೃಷ್ಟಿ
  • ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ

ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಕನಕಗಿರಿ: ತಾಲೂಕಿನ ಹುಲಿಹೈದರ ಹೋಬಳಿಯ ಗೋಡಿನಾಳ ಸೀಮಾದ ಸರ್ಕಾರಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಪಹಣಿ ಮಾಡಿಸಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹುಲಿಹೈದರ ಗ್ರಾಮಸ್ಥ ಸೋಮನಾಥ ಗದ್ದಿ ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿದರು.
ಗೋಡಿನಾಳ ಗ್ರಾಮದ ಸರ್ಕಾರಿ ಜಮೀನು ಸರ್ವೇ ನಂ.37ರಲ್ಲಿ ನೂರಾರು ಎಕರೆ ಜಮೀನಿಗೆ ಬೇರೆ ತಾಲೂಕಿನವರಿಗೆ 2006ರಲ್ಲಿ ಸಾಗುವಳಿ ಚೀಟಿ ಸೃಷ್ಟಿಸಿ ಮುಂದಿನ ದಿನಗಳಲ್ಲಿ ಪಹಣಿ ಸೃಷ್ಟಿಸಲು ಮುಂದಾಗಿರುವುದು ಅನ್ಯಾಯ. ಈಗಿರುವ ಕಠಿಣ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ಪಹಣಿ ಮಾಡುವುದಾಗಿ ಹೆಚ್ಚಿನ ಹಣದ ಬೇಡಿಕೆಯಿಡುವ ಮೋಸದ ಜಾಲದ ಹಿಂದೆ ಇರುವವರನ್ನು ಪತ್ತೆ ಮಾಡಲು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಇಲಾಖೆ ಸಿಬ್ಬಂದಿ ಪಾಲ್ಗೊಂಡಿರುವ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿಜಯವಾಣಿ ಪತ್ರಿಕೆಯ ವರದಿ ಉಲ್ಲೇಖಿಸಿ ಮನವಿ ಸಲ್ಲಿಸಿದ್ದಾರೆ.