ಲಂಚ ಕೇಳಿರುವ ಕನಕಗಿರಿ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಪಂ ಸದಸ್ಯ ಶೇಷಪ್ಪ ಪೂಜಾರ ಶುಕ್ರವಾರ ಕೊಪ್ಪಳದಲ್ಲಿ ಡಿಸಿ ಸುರೇಶ ಬಿ. ಇಟ್ನಾಳಗೆ ದೂರು ನೀಡಿದರು. ಬಿಜೆಪಿ ಯುವ ಮುಖಂಡ ನರಸಪ್ಪ ಕುರುಗೋಡ ಇದ್ದರು. 
ಕೊಪ್ಪಳ

ಪಪಂ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹ

ಕನಕಗಿರಿ: ಲೇಔಟ್ ಮಾಲೀಕರೊಬ್ಬರಿಗೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಪಂ ಸದಸ್ಯ ಶೇಷಪ್ಪ ಪೂಜಾರ ಕೊಪ್ಪಳದಲ್ಲಿ ಡಿಸಿ ಸುರೇಶ ಬಿ. ಇಟ್ನಾಳಗೆ ಶುಕ್ರವಾರ ದೂರು ನೀಡಿದ್ದಾರೆ.
ವೈರಲ್ ಆದ 44 ಸೆಕೆಂಡ್‌ಗಳ ಆಡಿಯೋ ಸಮೇತ ದೂರು ನೀಡಿದ್ದು, ಅದರಲ್ಲಿನ ಸಂಭಾಷಣೆಯನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಿ ಮುಖ್ಯಾಧಿಕಾರಿ ಅಮಾನತುಗೊಳಿಸಬೇಕು. ಲೋಕಾಯುಕ್ತ ಮೂಲಕ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಆಡಿಯೋ ಸಿಡಿ ಜತೆಗೆ ಪತ್ರಿಕಾ ವರದಿಗಳನ್ನೂ ಲಗತ್ತಿಸಲಾಗಿದೆ. ಈ ವೇಳೆ ಬಿಜೆಪಿ ಯುವ ಮುಖಂಡ ನರಸಪ್ಪ ಕುರುಗೋಡ ಇದ್ದರು.