ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳಾಗಿ ಅವಿರೋಧ ಆಯ್ಕೆಯಾದ ಅಧಿಕಾರಿಗಳು.
- ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಕೊಪ್ಪಳ: ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾದರು.
ಜಿಲ್ಲಾ ಅಧ್ಯಕ್ಷರಾಗಿ ಸುರೇಶ ಚಲವಾದಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ, ಸೌಮ್ಯ ಕೆ. ಆಯ್ಕೆಯಾದರು. ನಿಂಗಪ್ಪ ಮೂಲಿಮನಿ (ಖಜಾಂಚಿ), ಶಿವಬಸಪ್ಪ (ರಾಜ್ಯ ಪರಿಷತ್ ಸದಸ್ಯ), ಶ್ರೀಶೈಲ್ ಪೊಲ್ಮೇಶಿ (ಸಂಘಟನಾ ಕಾರ್ಯದರ್ಶಿ), ಜ್ಯೋತಿ ರಡ್ಡೇರ್ (ಸಂಘಟನಾ ಕಾರ್ಯದರ್ಶಿ), ವೆಂಕಟೇಶ (ಕ್ರೀಡಾ ಕಾರ್ಯದರ್ಶಿ), ಪುಷ್ಪಲತಾ ಸಿ. (ಸಾಂಸತಿಕ ಕಾರ್ಯದರ್ಶಿ)ಅವಿರೋಧ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸದಸ್ಯರು ಸನ್ಮಾನಿಸಿದರು. ತಾಪಂ ಯೋಜನಾಧಿಕಾರಿ ರಾಜಾಸಾಬ್ ನಧಾಫ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.