ಹಾಲಯ್ಯ ಹುಡೆಜಾಲಿ 
ಕೊಪ್ಪಳ

ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರಕ್ಕೆ ಪ್ರೋತ್ಸಾಹ ನೀಡಿ

ಪ್ರಮುಖ ಮುಖ್ಯಾಂಶಗಳು

  • ಹಾಲಯ್ಯ ಹುಡೆಜಾಲಿ ಮನವಿ

ಕೊಪ್ಪಳ : ಸಾಮಾಜಿಕ ಕಳಕಳಿ ಹಾಗೂ ಉತ್ತಮ ಸಂದೇಶ ಹೊಂದಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು, ಜಿಲ್ಲೆಯ ಜನರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಹಾಲಯ್ಯ ಹುಡೆಜಾಲಿ ಮನವಿ ಮಾಡಿದರು.


ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೊಪ್ಪಳದ ಶಿವ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರು ಆಸಕ್ತಿಯಿಂದ ವೀಕ್ಷಿಸಬಹುದಾದ ಚಿತ್ರವಾಗಿದೆ. ಜನರಿಂದ ಉತ್ತಮ ಬೆಂಬಲ ದೊರೆತರೆ ಚಿತ್ರದ ಎರಡನೇ ಭಾಗ ನಿಮಾರ್ಣಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಚಿತ್ರದಲ್ಲಿ ಕುಮಾರ ಬಂಗಾರಪ್ಪ ನಾಯಕನಾಗಿ ಹಾಗೂ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟ ದೊಡ್ಡಣ್ಣ, ನಟ ಶ್ರೀನಾಥ ಅವರ ಪುತ್ರ ಹಾಗೂ ಕೆ. ಶಿವರಾಮ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾನು ಸಹ ಈ ಚಿತ್ರದಲ್ಲಿ ಸಿಎಂ ಪಿಎ ಆಗಿ ಅಭಿನಯಿಸಿದ್ದು. ಕಥಾಹಂದರವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದ್ದು, ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿದೆ ಎಂದು ಹೇಳಿದರು.
ಚಿತ್ರವನ್ನು ನ್ಯಾಯಬೆಲೆ ಅಂಗಡಿ ಡೀಲರ್​ ಕೆ.ಎಸ್​. ರಘುಮೂರ್ತಿ ಮತ್ತು ಪದ್ಮಾವತಿ ಸೇರಿ ಒಟ್ಟು ಆರು ಜನ ನ್ಯಾಯಬೆಲೆ ಅಂಗಡಿ ಡೀಲರ್​ ಗಳು ಈ ಚಿತ್ರದ ನಿಮಾರ್ಪಕರಾಗಿದ್ದಾರೆ. ಜಿಲ್ಲೆಯ ಸಿನಿಪ್ರೇಮಿಗಳು ಸ್ಥಳಿಯ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಮಡಿವಾಳ, ಡೀಲರ್​ ಬಸವರಾಜ ಎಸ್​. ಗಿಣಗೇರಿ,ಕಲಾವಿದ ಈಶಪ್ಪ ಮಾಸ್ತರ ಹೋಜನಹಳ್ಳಿ ಇತರರಿದ್ದರು.