ಗಂಗಾವತಿ 10ನೇ ವಾರ್ಡ್ ಶರಣಬಸವೇಶ್ವರ ಕ್ಯಾಂಪ್ ಆಶುರ್‌ಖಾನ್‌ದಲ್ಲಿ ಗೌಸ್-ಓ-ರಜಾ ಪಂಚ್ ಕಮಿಟಿಯಿಂದ ಹಮ್ಮಿಕೊಂಡ ಎರಡನೇ ವರ್ಷದ ಸಾಮೂಹಿಕ ಖತ್ನ ಉಚಿತ ಶಿಬಿರದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಯಿತು. ಧರ್ಮಗುರು ಮೌಲಾನ ರಜಾವಲಿ, ಪ್ರಮುಖರಾದ ವಲೀಸಾಬ್, ಹೊನ್ನೂರ ಸಾಬ್, ದುರುಗೇಶ ದೊಡ್ಮನಿ, ಎಸ್.ಎಚ್.ಮುಧೋಳ ಇತರರಿದ್ದರು. 
ಕೊಪ್ಪಳ

ಜೀವನದ ಪವಿತ್ರ ಘಟ್ಟ ಸುನ್ನತ್

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆ
  • ಶಿಸ್ತಿನ
  • ಜೀವನಕ್ಕೆ
ಗಂಗಾವತಿ: ನಗರದ 10ನೇ ವಾರ್ಡ್ ಶರಣಬಸವೇಶ್ವರ ಕ್ಯಾಂಪ್ ಆಶುರ್‌ಖಾನ್‌ದಲ್ಲಿ ಗೌಸ್-ಓ-ರಜಾ ಪಂಚ್ ಕಮಿಟಿಯಿಂದ ಎರಡನೇ ವರ್ಷದ ಸಾಮೂಹಿಕ ಖತ್ನ ಉಚಿತ ಶಿಬಿರ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿದ ಧರ್ಮಗುರು ಮೌಲಾನಾ ರಜಾವಲಿ ಮಾತನಾಡಿ, ಖತ್ನ ಕಾರ್ಯಕ್ರಮ ಕೇವಲ ಸಂಪ್ರದಾಯವಲ್ಲ, ಇದು ಮಗುವಿನ ಆರೋಗ್ಯ, ಸ್ವಚ್ಛತೆ ಮತ್ತು ಶಿಸ್ತಿನ ಜೀವನಕ್ಕೆ ಇಸ್ಲಾಂ ಧರ್ಮ ನೀಡಿದ ಮಹತ್ವದ ಕೊಡುಗೆಯಾಗಿದೆ. ಸುನ್ನತ್ ಕಾರ್ಯಕ್ರಮವು ಮಗುವಿನ ಜೀವನದ ಪವಿತ್ರ ಘಟ್ಟವಾಗಿದೆ. ಧಾರ್ಮಿಕ ವಿಧಿಗಳೊಂದಿಗೆ ಸಮಾಜದ ಬಡವರಿಗೆ ನೆರವಾಗುವ ಇಂತಹ ಸೇವಾ ಕಾರ್ಯ ಪ್ರಶಂಸನೀಯ ಎಂದರು.
ಶಿಬಿರದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಪೌಷ್ಟಿಕ ಆಹಾರದ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರಮುಖರಾದ ಫಿಟ್ಟರ್ ವಲಿಸಾಬ್, ಸದ್ದಾಂ ಮಹಿಬೂಬ್, ಇಮಾಮ ಸಾಬ್, ಹಮೀದ್, ಮಹೆಬೂಬ್, ಹುಸೇನಪೀರಾ ಗುಜರಿ, ಯಮನೂರ ಸಾಬ್, ಹುಸೇನಸಾಬ್ ಕನಕಗಿರಿ, ಯಲ್ಲಪ್ಪ, ರಮೇಶ ಹತ್ತಿಮರದ, ಖಾಜಾ ಬರಗೂರು, ಅಮೀನ್ ಸಾಬ, ಷಹಾಬುದ್ದೀನ್, ಪಿ.ಪಿ.ರಾಜಾಸಾಬ್, ಉಮೇಶ ಬಂಡಿ ಇತರರಿದ್ದರು.