ಶ್ರೀರಾಮನಗರ ಸ.ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಸಿಡಿಸಿ ಉಪಾಧ್ಯಕ್ಷ ಭಾಸ್ಕರರಾವ್ ಉದ್ಘಾಟಿಸಿದರು. ಸದಸ್ಯರಾದ ಬೊಬ್ಬ ಸತ್ಯನಾರಾಯಣ, ರಮೇಶ ಕುಲಕರ್ಣಿ, ಪ್ರಾಚಾರ್ಯ ಡಿ.ಎಸ್.ಮಾಲಗೌಡರ್ ಇತರರಿದ್ದರು.
- ಗ್ರಾಮೀಣ
- ಪ್ರದೇಶ
- ಅಡ್ಡಿ ಅಲ್ಲ
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸ.ಪ.ಪೂ.ಕಾಲೇಜಿನಲ್ಲಿ ಪ್ರತಿಭಾಪುರಸ್ಕಾರ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕೇಸರಹಟ್ಟಿ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಶ್ರೀನಿವಾಸ ಅಂಗಡಿ ಮಾತನಾಡಿ, ಸಾಮರ್ಥ್ಯ, ಕಠಿಣ ಶ್ರಮ ಮತ್ತು ಸಂಸ್ಕಾರ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.
ಹಿರಿಯ ಉಪನ್ಯಾಸಕ ಸೋಮಶೇಖರಗೌಡ ಮಾತನಾಡಿ, ಸಾಧನೆಗೆ ಬಡತನ ಮತ್ತು ಗ್ರಾಮೀಣ ಪ್ರದೇಶ ಅಡ್ಡಿ ಅಲ್ಲ. ಸರ್ಕಾರಿ ಶಾಲೆಗಳಲ್ಲಿಯೂ ಸಹ ವಿದ್ಯಾರ್ಥಿಗಳು ಉತ್ತಮ ಲಿತಾಂಶ ಪಡೆಯುತ್ತಿದ್ದಾರೆ ಎಂದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವರ್ಗಾವಣೆಗೊಂಡ ಶಿಕ್ಷಕರಾದ ಸುನೀಲ್, ಸತ್ಯನಾರಾಯಣ, ಪ್ರಶಾಂತ ಜೋಶಿ, ಅತಿಥಿ ಉಪನ್ಯಾಸಕರಾದ ಹುಲ್ಲೇಶ, ದೇವರಾಜ, ರಮೇಶ ಅವರನ್ನು ಸನ್ಮಾನಿಸಲಾಯಿತು. ಸಿಡಿಸಿ ಉಪಾಧ್ಯಕ್ಷ ಭಾಸ್ಕರ್‌ರಾವ್, ಸದಸ್ಯರಾದ ಬೊಬ್ಬ ಸತ್ಯನಾರಾಯಣ, ಬೊಬ್ಬ ಕನಕದುರ್ಗರಾವ್, ರಮೇಶ್ ಕುಲಕರ್ಣಿ, ಪ್ರೌಢಶಾಲೆ ಮುಖ್ಯಶಿಕ್ಷಕಿ ವಾಸಂತಿ, ಪ್ರಮುಖ ಮಂಜುನಾಥ ಜೀರಾಳ್, ಕಾಲೇಜು ಪ್ರಾಚಾರ್ಯ ಡಿ.ಎಸ್.ಮಾಲಗೌಡರ್, ಉಪನ್ಯಾಸಕರಾದ ಕಾವ್ಯಾಂಜಲಿ, ಮಂಜುನಾಥ, ವಿಜಯಲಕ್ಷ್ಮೀ, ಪಾರ್ವತಿ, ರಮೇಶ ಇತರರಿದ್ದರು.