ಅಳವಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟಕ್ಕೆ ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಚಾಲನೆ ನೀಡಿದರು. ಪ್ರಮುಖರಾದ ಸಿದ್ದು ಪೂಜಾರ, ಶಂಕರಪ್ಪ ಮೇಟಿ, ಸಂತೋಷ, ವಿಶ್ವನಾಥ ಕಿಲ್ಲೆದ, ಬಸವರಾಜ ಗೋಣಿಸ್ವಾಮಿ, ಅಂಬಣ್ಣ, ಯಶವಂತ ಇತರರಿದ್ದರು.
- ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಹೇಳಿಕೆ
- ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ
ಅಳವಂಡಿ: ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಹೇಳಿದರು.
ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ರೈತರು ಭೂಮಿ ಹಸಿಯಾದ ನಂತರ ಬಿತ್ತನೆ ಆರಂಭಿಸಬೇಕು. ಭೂಮಿಗೆ ಅಗತ್ಯ ಇದ್ದರೆ ಮಾತ್ರ ರಾಸಾಯನಿಕ ಬಳಸಬೇಕು. ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾದ ಮೆಕ್ಕೆಜೋಳ, ಹೆಸರು, ತೊಗರಿ, ಸೂರ್ಯಕಾಂತಿ ವಿವಿಧ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪೂರೈಸಲಾಗುವುದು. ಮೆಕ್ಕೆಜೋಳ 78 ಕ್ವಿ., ಹೆಸರು 10 ಕ್ವಿ., ತೊಗರಿ 15 ಕ್ವಿ., ಸೂರ್ಯಕಾಂತಿ 8 ಕ್ವಿ., ಸಜ್ಜೆ 2.5 ಕ್ವಿ. ದಾಸ್ತಾನು ಇದ್ದು, ರಿಯಾಯಿತಿ ದರದಲ್ಲಿ ಬೀಜ ಪಡೆಯಲು ಅಗತ್ಯ ದಾಖಲೆ ನೀಡಬೇಕು ಎಂದರು.
ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ, ಪ್ರಮುಖರಾದ ಸಿದ್ದು ಪೂಜಾರ, ಶಂಕರಪ್ಪ ಮೇಟಿ, ಸಂತೋಷ, ವಿಶ್ವನಾಥ ಕಿಲ್ಲೆದ, ಬಸವರಾಜ ಗೋಣಿಸ್ವಾಮಿ, ಅಂಬಣ್ಣ, ಯಶವಂತ ರೆಡ್ಡಿ, ಶಿವಯೋಗಿ ಸ್ವಾಮಿ, ಗಂಗಾಧರ ಸ್ವಾಮಿ, ದೇವಪ್ಪ ಕಟ್ಟಿಮನಿ, ಯಲ್ಲಪ್ಪ, ಬಸವರಾಜ ದೇಸಾಯಿ, ದೇವೇಂದ್ರಪ್ಪ, ವಿರೂಪಾಕ್ಷಪ್ಪ ಜೋಳದ, ಅಪ್ಪಣ್ಣ, ಸುರೇಶ, ಹರೀಶ, ಹನುಮರಡ್ಡಿ ಇತರರಿದ್ದರು.