ಸಂಜನಾ ಉತ್ತರ ಪತ್ರಿಕೆಯಲ್ಲಿ ಕನ್ನಡ ವಿಷಯಕ್ಕೆ 71 ಅಂಕ ಪಡೆದಿರುವುದು.
- ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಕೊಪ್ಪಳ : ತಾಲೂಕಿನ ಕಾತರಕಿ ಸರ್ಕಾರಿ ಪ್ರೌಢ ಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಂಜನಾ ಹಡಪದ ಲಿತಾಂಶ ಪ್ರಕಟಣೆಯಲ್ಲಿ ಬೋರ್ಡ್ ಮಾಡಿದ ಎಡವಟ್ಟಿನಿಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಟನೆ ನಡೆದಿದೆ. ಕನ್ನಡ ವಿಷಯದಲ್ಲಿ ತಪ್ಪಾದ ಅಂಕ ನಮೂದಿಸಿ ಅನುತ್ತೀರ್ಣಗೊಳಿಸಿದ್ದು ಟನೆಗೆ ಕಾರಣ.
ಏ.24ರಂದು ಲಿತಾಂಶ ಪರೀಸಿದಾಗ ಕನ್ನಡ ವಿಷಯದಲ್ಲಿ 12 ಅಂಕ ಬಂದಿದ್ದು ೇಲ್ ಆಗಿರುವುದು ಗೊತ್ತಾಗಿದೆ. ಇದರಿಂದ ಬಾಲಕಿ ಗಾಬರಿಯಾಗಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಓದಿದರೂ ಕನ್ನಡ ವಿಷಯದಲ್ಲಿ ೇಲ್ ಆಗಿದ್ದೀಯ ಎಂದು ಸಹಪಾಠಿಗಳು ನಿಂದಿಸಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿದ್ದ ಹತ್ತಾರು ಮಾತ್ರೆ ನುಂಗಲು ಯತ್ನಿಸಿದ್ದಾಳೆ. ವಿದ್ಯಾರ್ಥಿನಿ ಪಾಲಕರು ನಿತ್ಯ ಜಮೀನು ಕೆಲಸಕ್ಕೆ ತೆರಳುತ್ತಿದ್ದು, ಅಂದೂ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದವರು ವಿಷಯ ತಿಳಿದು ಮಾತ್ರೆ ನುಂಗುವುದನ್ನು ತಪ್ಪಿಸಿದ್ದಾರೆ.
ಬಳಿಕ ಸ್ನೇಹಿತರು, ಶಾಲೆಯ ಮುಖ್ಯಶಿಕ್ಷಕರು ಉತ್ತರ ಪತ್ರಿಕೆ ನಕಲು ಪ್ರತಿಗೆ ಅರ್ಜಿ ಸಲ್ಲಿಸಿ ಪಡೆದಿದ್ದಾರೆ. ಪರಿಶೀಲಿಸಿದಾಗ ಕನ್ನಡ ವಿಷಯಕ್ಕೆ 71 ಅಂಕ ಪಡೆದಿದ್ದಾಳೆ. 25 ಆಂತರಿಕ ಅಂಕ ಸೇರಿ 96 ಅಂಕ ಆಗಲಿವೆ. ಒಟ್ಟಾರೆ 448ಅಂಕ ಪಡೆದಿದ್ದು ಶೇ.71.68ರಷ್ಟು ಲಿತಾಂಶ ಬರಬೇಕಿತ್ತು. ಬೋರ್ಡ್ ಮಾಡಿದ ಎಡವಟ್ಟಿನಿಂದ ಬಾಲಕಿ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಿದ್ದು ದುರಂತ.
ನನಗಾದ ಅನ್ಯಾಯ ಬೇರೆ ವಿದ್ಯಾರ್ಥಿಗಳಿಗೆ ಆಗಬಾರದು. ಅಕ್ಕಪಕ್ಕದವರು ಇಲ್ಲದಿದ್ದರೆ ನಾನು ಪ್ರಾಣ ಕಳೆದುಕೊಳ್ಳುತ್ತಿದ್ದೆ. ಸರಿಯಾಗಿ ಉತ್ತರ ಪತ್ರಿಕೆ ಪರಿಶೀಲಿಸಿ ಅಂಕ ನೀಡಬೇಕು. ಅನ್ಯಾಯ ಸರಿಪಡಿಸಬೇಕು.