ಅಳವಂಡಿಯ ಕೇಂದ್ರೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಂಡಿ ಕ್ಲಸ್ಟರ್ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಯಿತು. ಸಿಆರ್‌ಪಿ ವಿಜಯಕುಮಾರ, ಮುಖ್ಯ ಶಿಕ್ಷಕರಾದ ಶಾರದಾ ವಡ್ಡರ್, ಗುರುರಾಜ ಪಾಟೀಲ್, ಜಯಲಕ್ಷ್ಮೀ ಲಕ್ಷ್ಮೇಶ್ವರ, ನಾರಾಯಣ ಅಂಬೋರೆ, ಗಿರಿಯಪ್ಪ ಹಮ್ಮಗಿ, ಪರಮೇಶಪ್ಪ ಗೊಂಡಬಾಳ, ಮಾರುತಿ ಕಟಗಾಲಿ, ದಾದಾ ಖಲಂದರ್, ಸುನಂದಾ ನಾಗರಳ್ಳಿ, ವೆಂಕರಡ್ಡಿ ಇಮ್ಮಡಿ, ಶಿವಗ್ಯಾನಮ್ಮ ಹಳ್ಳಿಕೇರಿ  
ಕೊಪ್ಪಳ

ಕಲಿಕಾ ಹಬ್ಬ ಯಶಸ್ಸಿಗೆ ಶ್ರಮಿಸಿ

ಪ್ರಮುಖ ಮುಖ್ಯಾಂಶಗಳು

  • ಸಿಆರ್‌ಪಿ ವಿಜಯಕುಮಾರ ಟಿಕಾರೆ ಸೂಚನೆ
  • ಅಳವಂಡಿ ಕಂಪ್ಲಿ ಕ್ಲಸ್ಟರ್‌ ಕಲಿಕಾ ಹಬ್ಬ
ಅಳವಂಡಿ: ಅಳವಂಡಿ ಕ್ಲಸ್ಟರ್‌ನ ಕಲಿಕಾ ಹಬ್ಬವನ್ನು ಫೆ.6 ರಂದು ಸಮೀಪದ ಕಂಪ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಇದರ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಸಿಆರ್‌ಪಿ ವಿಜಯಕುಮಾರ ಟಿಕಾರೆ ತಿಳಿಸಿದರು.
ಗ್ರಾಮದ ಕೇಂದ್ರೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಳವಂಡಿ ಕ್ಲಸ್ಟರ್ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಮುಖ್ಯಶಿಕ್ಷಕರು ಇಲಾಖೆ ಮೆನು ಪ್ರಕಾರ ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ನೀಡಬೇಕು.
ಪೌಷ್ಟಿಕ ಆಹಾರಗಳಾದ ಮೊಟ್ಟೆ, ಬಾಳೆಹಣ್ಣನ್ನು ಪ್ರತಿದಿನವೂ ನೀಡಬೇಕು. ಮಕ್ಕಳ ಹಾಜರಾತಿಯನ್ನು ದಾಖಲಿಸಬೇಕು. ಗ್ರಂಥಾಲಯ, ಕ್ರೀಡಾ ಹಾಗೂ ಶಾಲಾ ಅನುದಾನವನ್ನು ಇಲಾಖೆಯ ನಿಯಮಾನುಸಾರ ಖರ್ಚು ಮಾಡಿ ವರದಿ ನೀಡಬೇಕು. ಇಲಾಖೆಯ ಕಾರ್ಯಾಗಾರ, ತರಬೇತಿಗಳಿಗೆ ನಿಯೋಜಿಸಿದ ಶಿಕ್ಷಕರು ಕಡ್ಡಾಯವಾಗಿ ಹಾಜರಾಗುವಂತೆ ನೋಡಿಕೊಳ್ಳಬೇಕು. ತಿಂಗಳುವಾರು ಮಕ್ಕಳ ಹಾಜರಾತಿಯನ್ನು ಅಪ್ಡೇಟ್ ಮಾಡಿ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ಸಚೇತನ, ಗಣಿತ, ಗಣಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.