ಅಳವಂಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಕ್ಕಳು ಪಾಲಕರ ಪಾದಪೂಜೆ ಮಾಡಿದರು. 
ಕೊಪ್ಪಳ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ

ಪ್ರವೀಣ ಉದುಸಾ ದಲಬಂಜನ್
ಅಳವಂಡಿ: ಶಿಕ್ಷಕ ಮತ್ತು ಪಾಲಕರ ಉತ್ತಮ ಬಾಂಧವ್ಯದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಪ್ರಾಚಾರ್ಯ ಆರ್.ಎಂ. ಕಮತರ ತಿಳಿಸಿದರು.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಸಭೆಯಲ್ಲಿ ಬುಧವಾರ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪಾಲಕರು-ಶಿಕ್ಷಕರು ಜಂಟಿಯಾಗಿ ಶ್ರಮಿಸಬೇಕು. ಕಲಿಕೆಗೆ ಬೆಂಬಲ ಹಾಗೂ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಇದು ಮಗುವಿನ ಶೈಕ್ಷಣಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಪಾಲಕರ ಪ್ರತಿನಿಧಿ ಶಂಕ್ರಪ್ಪ ಬಂಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು. ಮನೆ ಮತ್ತು ಶಾಲೆ ಎರಡೂ ಕಡೆಗಳಲ್ಲಿ ಮಕ್ಕಳ ಓದಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯ ಕರ್ತವ್ಯವಾಗಿದೆ ಎಂದರು.
ವಿದ್ಯಾರ್ಥಿನಿಯರು ಪಾಲಕರ ಪಾದಗಳನ್ನು ತೊಳೆದು ಪೂಜಿಸಿದರು. ಪಾಲಕರ ಪ್ರತಿನಿಧಿ ಸರಳಾದೇವಿ, ನಿಲಯ ಪಾಲಕರಾದ ಮಲ್ಲಿಕಾರ್ಜುನ ಅಣ್ಣಿಗೇರಿ, ಶಿಕ್ಷಕರಾದ ಸತ್ಯಪ್ಪ ಕಂಬಳಿ, ಮಲ್ಲಿಕಾರ್ಜುನ ಮುಧೋಳ, ಬಸನಗೌಡ ಮಾಲಿಪಾಟೀಲ, ಪರ್ವೀನ್ ಬಾನು, ದ್ಯಾಮವ್ವ, ಮಂಜುನಾಥ ಇತರರು ಇದ್ದರು.