ಆರ್. ವಿರೂಪಾಕ್ಷಮೂರ್ತಿ  
ಕೊಪ್ಪಳ

ಘನ್ಯ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮ

ಪ್ರಮುಖ ಮುಖ್ಯಾಂಶಗಳು

  • ತ್ಯಾಜ್ಯ
  • ಸಂಸ್ಕರಣಾ
  • ಸೌಲಭ್ಯ
ಗಂಗಾವತಿ: ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಂತೆ ಘನ್ಯ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ ಜಾರಿಗೊಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026ಕಾಯ್ದೆಯನ್ನು ತತ್‌ಕ್ಷಣದಿಂದಲೇ ಜಾರಿಗೆ ತರಲಾಗಿದೆ. ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹಸಿ, ಒಣ, ಸ್ಯಾನಿಟರಿ, ಹಾಗೂ ವಿಶೇಷ ರೀತಿಯ ತ್ಯಾಜ್ಯಗಳು (ಬಲ್ಬ್‌ಗಳು, ಬ್ಯಾಟರಿಗಳು, ಅವಧಿ ಮೀರಿದ ಔಷಧಗಳು, ಪೇಂಟ್ ಡಬ್ಬಿಗಳು ಇತ್ಯಾದಿ) ವಿಂಗಡಣೆ ಕಡ್ಡಾಯ.
ಉದ್ದಿಮೆದಾರರು, ಕಲ್ಯಾಣ ಮಂಟಪದ ವ್ಯವಸ್ಥಾಪಕರು, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಮತ್ತು ಇತರೆ ಉದ್ದಿಮೆದಾರರು 100 ಕೆ.ಜಿ ತ್ಯಾಜ್ಯ ಅಥವಾ 40 ಸಾವಿರ ಲೀ. ನೀರು ಅಥವಾ 20 ಸಾವಿರ ಚ.ಮೀ ಗಿಂತ ಹೆಚ್ಚಿನ ವಿಸ್ತೀರ್ಣವುಳ್ಳ ವಾಣಿಜ್ಯ ಪ್ರದೇಶದವರು ಬಹತ್ ತ್ಯಾಜ್ಯ ಉತ್ಪಾದಕರೆಂದು ಘೋಷಿಸಲಾಗಿದೆ. ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಿಸಬೇಕು.
ತ್ಯಾಜ್ಯ ಸಂಸ್ಕರಣಾ ಸೌಲಭ್ಯವು ಲಭ್ಯವಿಲ್ಲದಿದ್ದಲ್ಲಿ ನಗರಸಭೆ ಕಾರ್ಯಾಲಯಕ್ಕೆ ತ್ಯಾಜ್ಯಗಳನ್ನು ವಿಂಗಡಿಸಿ ನೀಡಬೇಕಿದ್ದು, ಕಾರ್ಯಾಲಯ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ನಿಯಮಗಳನ್ನು ಉಲ್ಲಂಸುವವರ ವಿರುದ್ಧ ನೀರು, ವಿದ್ಯುತ್ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿ ಇತರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.