ಕನಕಗಿರಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಜ್ಯೋತಿಯನ್ನು ಪ್ರಾಚಾರ್ಯ ಸುಭಾಷಚಂದ್ರ ಪಾಟೀಲ್ ಬೆಳಗಿಸಿದರು. 
ಕೊಪ್ಪಳ

ಕ್ರೀಡೆಗಳಿಂದ ಒತ್ತಡ ನಿವಾರಣೆ

ನರೇಶ್ ಕುಮಾರ್

ಕನಕಗಿರಿ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ನವಲಿ ಪಿಯು ಕಾಲೇಜಿನ ಪ್ರಾಚಾರ್ಯ ಸುಭಾಷಚಂದ್ರ ಪಾಟೀಲ್ ಹೇಳಿದರು.

ನವಲಿ ಗ್ರಾಮದ ಪಿಯು ಕಾಲೇಜಿನಲ್ಲಿ ಆಯೋಜಿಸಿರುವ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಕ್ರೀಡೆಗಳು ಒತ್ತಡವನ್ನು ಕಡಿಮೆ ಮಾಡಿ ಸದಾ ಚುರುಕಾಗಿಡಲು ಸಹಾಯ ಮಾಡುತ್ತವೆ. ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಹಣ, ಆಸ್ತಿಗಿಂತ ಆರೋಗ್ಯ ಮುಖ್ಯವಾಗಿದೆ. ಅದಕ್ಕಾಗಿ ಪ್ರತಿನಿತ್ಯ ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು ಎಂದರು. 
ತಾಲೂಕಿನ 5 ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೆಹಬೂಬ್, ಸದಸ್ಯರಾದ ಅಂಬಣ್ಣ ನಾಯಕ, ಹನುಮಂತಪ್ಪ ಗಂಗಾಮತ, ರಾಮಲಿಂಗಪ್ಪ ಕಂಬಳಿ, ವೀರೇಶ ನಾಯಕ, ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜ ತಳವಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಶಂಶಾದಬೇಗಂ, ಸದಸ್ಯರಾದ ನಿಂಬಣ್ಣ, ಶೇಖರಯ್ಯ ಉಪನ್ಯಾಸಕರಾದ ಶಿವಪುತ್ರಪ್ಪ, ಹನುಮಂತಪ್ಪ ಇತರರಿದ್ದರು.