ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು. ಕಾರ್ಯಕರ್ತರಾದ ವಾಣಿ ಮಠದ, ಗೀತಾ ಬಳ್ಳಾರಿ, ಗೀತಾ ಮುತ್ತಾಳ, ಕೀರ್ತಿ ಪಾಟೀಲ್​, ರೇಖಾ ರಾಯಭಾಗಿ, ಮಹಾಲಕ್ಷಿ$್ಮ ಕಂದಾರಿ, ಜಯಶ್ರೀ ಗೊಂಡಬಾಳ, ಸರಸ್ವತಿ, ಶೈಲಜಾ, ನೀಲಕಂಠಯ್ಯ ಹಿರೇಮಠ, ಗಣೇಶ್​ ಹೊರ ತಟ್ನಾಳ ಇದ್ದರು.  
ಕೊಪ್ಪಳ

ಮಹಿಳಾ ದೌರ್ಜನ್ಯ ತಡೆಯಿರಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕರ್ತರ ಆಗ್ರಹ
  • ಕೊಪ್ಪಳದಲ್ಲಿ ಪ್ರತಿಭಟನೆ
ಕೊಪ್ಪಳ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲಿನ ಹಲ್ಲೆ ಹಾಗೂ ಸುಳ್ಯ ಶಾಸಕಿ ಭಾಗೀರತಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಎಂಬುವವರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಇದು ಮಹಿಳೆಯರಿಗೆ ಮಾಡಿದ ಅವಮಾನ. ಸುಳ್ಯ ಶಾಸಕಿ ಭಾಗೀರತಿ ಅವರನ್ನು ಅವಮಾನಿಸುವಂತೆ ಬಿಲ್ಲವ ಸಂದೇಶ ಎಂಬುವವರು ಸಾಮಾಜಿಕ ಜಾಲ ತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಪೋಸ್ಟ್​ ಮಾಡಿ ಅವಮಾನ ಮಾಡಿದ್ದಾರೆ. ದಲಿತ ಶಾಸಕಿಯನ್ನು ಅವಮಾನ ಮಾಡಿರುವುದು ಅಕ್ಷಮ್ಯ. ಪೊಲೀಸರು ಗೂಂಡಾ ವರ್ತನೆ ತೋರುತ್ತಿದ್ದಾರೆ. ಸರ್ಕಾರದ ಹಿಡಿತದಲ್ಲಿಲ್ಲ ಎಂದು ಆರೋಪಿಸಿದರು.
ಕೂಡಲೇ ದೌಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಲ್ಲವ ಸಂದೇಶ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಆಗ್ರಹಿಸಿದರು. ಪ್ರತಿಭಟನೆ ಬಳಿಕ ಎಡಿಸಿ ಮೂಲಕ ರಾಜ್ಯ ಸರ್ಕಾಕ್ಕೆ ಮನವಿ ಸಲ್ಲಿಸಿದರು.
ಕಾರ್ಯಕರ್ತರಾದ ವಾಣಿ ಮಠದ, ಗೀತಾ ಬಳ್ಳಾರಿ, ಗೀತಾ ಮುತ್ತಾಳ, ಕೀರ್ತಿ ಪಾಟೀಲ್​, ರೇಖಾ ರಾಯಭಾಗಿ, ಮಹಾಲಕ್ಷಿ$್ಮ ಕಂದಾರಿ, ಜಯಶ್ರೀ ಗೊಂಡಬಾಳ, ಸರಸ್ವತಿ, ಶೈಲಜಾ, ನೀಲಕಂಠಯ್ಯ ಹಿರೇಮಠ, ಗಣೇಶ್​ ಹೊರ ತಟ್ನಾಳ, ಸುನಿಲ್​ ಹೆಸರೂರು, ಸದಾಶಿವಯ್ಯ ಹಿರೇಮಠ್​, ಸಿದ್ದು ಪಾಟೀಲ್​ ಇತರರಿದ್ದರು.