ಕೊಪ್ಪಳದಲ್ಲಿ ರಾಜ್ಯ ರೈತ ಸಂ (ಚುನ್ನಪ್ಪ ಪುಜೇರಿ ಬಣ)ದವರು 30ಕ್ಕೂ ಹೆಚ್ಚು ಟ್ರಾೃಕ್ಟರ್‌ಗಳೊಂದಿಗೆ ಪ್ರತಿಭಟನಾ ಮೇರವಣಿಗೆ ನಡೆಸಿದರು. ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಿ., ಉಪಾಧ್ಯಕ್ಷ ಹನುಮಂತ ನಾಯಕೋಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮುರಳಿ, ಕಾರ್ಯದರ್ಶಿ ಮಹೇಶಗೌಡ ಸುಬೇದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ ಇತರರಿದ್ದರು.
- ರೈತ ಸಂಘ ಒತ್ತಾಯ
- ಕೊಪ್ಪಳದಲ್ಲಿ ಟ್ರಾೃಕ್ಟರ್‌ಗಳೊಂದಿಗೆ ಪ್ರತಿಭಟನಾ ಮೇರವಣಿಗೆ
ಕೊಪ್ಪಳ: ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ವಾಡಲು ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂ (ಚುನ್ನಪ್ಪ ಪುಜೇರಿ ಬಣ) ಗುರುವಾರ ನಗರದಲ್ಲಿ 30ಕ್ಕೂ ಹೆಚ್ಚು ಟ್ರಾೃಕ್ಟರ್‌ಗಳೊಂದಿಗೆ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೇರವಣಿಗೆ ನಡೆಸಿತು.
ರೈತ ಮುಖಂಡರು ವಾತನಾಡಿ, ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವ ಕೆಪಿಟಿಸಿಎಲ್‌ನ ವಿದ್ಯುತ್ ಜಾಲವನ್ನು ಖಾಸಗೀಕರಣ ವಾಡಲು ಹೊರಟಿರುವುದು ಸರಿಯಲ್ಲ. ಇದರಿಂದ ರೈತರು, ಬಡವರಿಗೆ ತೊಂದರೆಯಾಗಲಿದೆ. ಅಲ್ಲದೇ ಯೂನಿಟ್ ಕರೆಂಟ್ ದರ ಹೆಚ್ಚಿ ಜನರಿಗೆ ಹೊರೆಯಾಗಲಿದೆ. ವಿದ್ಯುತ್ ಸರಬರಾಜಿಗೆ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಖಾಸಗೀಕರಣದಿಂದ ಸ್ಮಾರ್ಟ್ ಮೀಟರ್ ಬರುತ್ತದೆ. ಸರ್ಕಾರದ ಗೃಹ ಜ್ಯೋತಿಯಂತಹ ಅನೇಕ ಜನಪರ ಯೋಜನೆಗಳು ನಿಲ್ಲುತ್ತವೆ. ಮೊಬೈಲ್ ರಿಚಾರ್ಜ್‌ನಂತೆ ವಿದ್ಯುತ್‌ಗೆ ಅಡ್ವಾನ್ಸ್ ರಿಚಾರ್ಜ್ ವಾಡಿಸುವ ಸ್ಥಿತಿ ಬರಬಹುದು. ಅನ್ನದಾತ ಈಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ವ್ಯವಸ್ಥೆಯಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಆಸ್ತಿ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ಖಾಸಗೀಕರಣವು ರೈತ ವಿರೋಧಿ ನೀತಿಯಾಗಿದೆ. ಕೃಷಿ ಉತ್ಪನ್ನಗಳ ಉತ್ಪಾದನೆಯೂ ಕುಂಠಿತವಾಗುತ್ತದೆ. ಇದರಿಂದ ಖಾಸಗಿಯವರಿಗೆ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಖಾಸಗೀಕರಣ ಕೈಬಿಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ವಾಡಬೇಕು ಎಂದು ಒತ್ತಾಯಿಸಿ ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಂದ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಿ., ಉಪಾಧ್ಯಕ್ಷ ಹನುಮಂತ ನಾಯಕೋಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮುರಳಿ, ಕಾರ್ಯದರ್ಶಿ ಮಹೇಶಗೌಡ ಸುಬೇದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ, ರೈತ ಮುಖಂಡರಾದ ಬಸವರಾಜ ಚಿಲವಾಡಗಿ, ಶಿವಕುವಾರ ಹಳ್ಳಿ, ಯಮನೂರಪ್ಪ ಹಳ್ಳಿಕೇರಿ, ಸಿದ್ದಲಿಂಗಪ್ಪ ಕಿನ್ನಾಳ, ವೀರೇಶಪ್ಪ ಹಣವಾಳ, ರಮೇಶ ಕೊಟ್ಟೂರ, ಈರಯ್ಯ, ಇಸ್ಮಾಯಿಲ್ ಇತರರಿದ್ದರು.