ಶಿವಾನಂದಯ್ಯ ರಾಮಯ್ಯ ಗುರುವಿನ  
ಕೊಪ್ಪಳ

ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಗೊಳಿಸಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಶಿವಾನಂದಯ್ಯಆಗ್ರಹ
ಕೊಪ್ಪಳ : ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಮತ್ತು ಮಣ್ಣು ಸಾಗಾಣಿಕೆ ಮಾಡುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಿ, ನೀಡಿರುವ ಪರವಾನಗಿಯನ್ನು ರದ್ದುಪಡಿಸಬೇಕೆಂದು ಹಲವಾಗಲಿ ಗ್ರಾಮದ ಶಿವಾಂದಯ್ಯ ರಾಮಯ್ಯ ಗುರುವಿನ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಅಳವಂಡಿ ಹೋಬಳಿಯ ಹಲವಾಗಲಿ, ಕೇಸಲಾಪೂರ, ನಿಲೋಗಿಪೂರ, ಬೋಚನಹಳ್ಳಿ, ತಿಗರಿ ಹಾಗೂ ಹನುಕುಂಟೆ ಗ್ರಾಮಗಳ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಅಂತರ್ಜಲ ಕುಸಿತ ಉಂಟಾಗಿ ರೈತರ ಕೊಳವೆಬಾವಿಗಳು ಬತ್ತುತ್ತಿದ್ದು, ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ದೂರಿದರು..
ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ, ಪೊಲೀಸ್​, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಮುಖ್ಯ ಮಂತ್ರಿ, ಗೃಹ ಸಚಿವರ, ಬೆಂಗಳೂರು ಪೋಲಿಸ ಆಯುಕ್ತರು ಐ.ಜಿ. ಮತ್ತು ಡಿ.ಜಿ, ಬಳ್ಳಾರಿ ವಲಯ ಪೋಲಿಸ ಮಹಾ ನಿರ್ದೇಶಕರ ಕಚೇರಿಗೆ ದೂರು ನೀಡಲಾಗಿದೆ. ತಕ್ಷಣ ಅಕ್ರಮ ಮರಳು ಸಾಗಾಣಿಕೆ ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ವಿವಿಧ ಸಂಘಟನೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.