ಯಲಬುರ್ಗಾ ಹಳೇ ಪಂಚಾಯತ್ ರಾಜ್ ಕಚೇರಿ ಆವರಣದಲ್ಲಿ ಬಸವೇಶ್ವರ ಪುತ್ಥಳಿ ಮತ್ತು ಪಾರ್ಕ್ ನಿರ್ಮಾಣ ಹಿನ್ನೆಲೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು. ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಪಪಂ ಮುಖ್ಯಾಧಿಕಾರಿ ನಾಗೇಶ, ನಿರ್ಮಿತಿ ಕೇಂದ್ರದ ಅಧಿಕಾರಿ ಅನಿಲ ಪಾಟೀಲ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಇತರರಿದ್ದರು.
- ಬಸವರಾಜ ರಾಯರಡ್ಡಿ ಅಭಿಮತ
- ಯಲಬುರ್ಗಾ ಪುತ್ಥಳಿ ಪಾರ್ಕ್ ಸ್ಥಳ ಪರಿಶೀಲಿಸಿದರು
ಯಲಬುರ್ಗಾ: ಪಟ್ಟಣದ ಹಳೇ ಪಂಚಾಯತ್ ರಾಜ್ ಕಚೇರಿ ಆವರಣದಲ್ಲಿ ಬಸವೇಶ್ವರ ಪುತ್ಥಳಿ ಮತ್ತು ಪಾರ್ಕ್ ನಿರ್ಮಾಣ ಹಿನ್ನೆಲೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.
ಬಳಿಕ ಮಾತನಾಡಿ, ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ, ಉದ್ಯಾನ ನಿರ್ಮಾಣ ಕಾರ್ಯ ಆಗಲಿದ್ದು, ಇದಕ್ಕಾಗಿ ಸರ್ಕಾರದಿಂದ 60 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗುವುದು. ಇನ್ನು ಕುಕನೂರು ಪಟ್ಟಣದಲ್ಲಿ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸರ್ಕಾರದ ಅನುದಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಅವಶ್ಯಕ ಎಂದರು.
ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಪಪಂ ಮುಖ್ಯಾಧಿಕಾರಿ ನಾಗೇಶ, ನಿರ್ಮಿತಿ ಕೇಂದ್ರದ ಅಧಿಕಾರಿ ಅನಿಲ ಪಾಟೀಲ, ರಾಜಶೇಖರ ಮಳಿಮಠ, ಇಂಜಿನಿಯರ್ ಉಮೇಶ ಬೇಲಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರನಗೌಡ ಬಳೂಟಗಿ, ಮಂಜುನಾಥ ಕಡೆಮನಿ, ವೀರನಗೌಡ ಬನ್ನಪ್ಪಗೌಡ್ರ, ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುರೇಶಗೌಡ ಶಿವನಗೌಡ್ರ, ಆನಂದ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ರೇವಣಪ್ಪ ಹಿರೇಕುರಬರ, ಈಶ್ವರ ಅಟಮಾಳಗಿ, ಅಶೋಕ ಮಾಲಿಪಾಟೀಲ್, ಶರಣಗೌಡ ಬಸಾಪುರ, ತಿಮ್ಮಣ್ಣ ತಳಕಲ್, ಶಿವು ರಾಜೂರು, ಸಿದ್ರಾಮೇಶ ಬೆಲೇರಿ, ರಿಜ್ವಾನ ವಾಲಿಕಾರ ಇತರರಿದ್ದರು.