ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತು ಸೋಮವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಿಡಿಪಿಐ ಸೋಮಶೇಖರಗೌಡ ಪಾಟೀಲ್​, ಡಿಡಿಪಿಯು ಜಗದೀಶ ಜಿ.ಎಚ್​. ಇದ್ದರು.  
ಕೊಪ್ಪಳ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕವಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ
  • ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಕೊಪ್ಪಳ : ಇದೇ ಮಾ.18ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕವಾಗಿ ನಡೆಸಿ. ಯಾವುದೇ ಅಕ್ರಮ ನಡೆಯದಂತೆ ಎಚ್ಚವರಹಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಮಾ.18ರಿಂದ ಏಪ್ರೀಲ್​ 2ವರೆಗೆ ಪರೀಕ್ಷೆ ಇರಲಿವೆ. ಅಕ್ರಮಕ್ಕೆ ಅವಕಾಶ ನೀಡದೆ ನಿಯಮಗಳಂತೆ ಪರೀೆ ನಡೆಸಿ. ಮುಖ್ಯ ಅಧೀಕ್ಷಕರು ಮಾರ್ಗಸೂಚಿ ಓದಿಕೊಂಡು ಕೆಲಸ ಮಾಡಿ. ವಿದ್ಯಾರ್ಥಿಗಳಿಗೆ ಸೂಕ್ತ ಆಸನ, ಕುಡಿವ ನೀರು, ಶೌಚಗೃಹ ಇತರ ಸೌಲಭ್ಯ ಕಲ್ಪಿಸಿ. ಅಂಗವಿಕಲ ವಿದ್ಯಾರ್ಥಿಗಳಿಗೆ ನೆಲ ಮಹಡಿಯಲ್ಲಿ ಸೂಕ್ತ ಆಸನ ಇರುವಂತೆ ನೋಡಿಕೊಳ್ಳಿ. ಅಂಧರಿಗೆ ಪ್ರತ್ಯೇಕ ಕೊಠಡಿ, ಬರವಣಿಗೆ ಸಹಾಯಕರ ಒಪ್ಪಿಗೆ ಪತ್ರ ಪರಿಶೀಲಿಸಿ ಕ್ರಮವಹಿಸಿ. ಮೂರು ವಾರ್ಷಿಕ ಪರೀಕ್ಷೆ ಇರಲಿದ್ದು ಮಕ್ಕಳು ಭಯಪಡುವ ಅಗತ್ಯವಿಲ್ಲ. ಈ ಬಗ್ಗೆ ಮಕ್ಕಳಿಗೆ ತಿಳಿಸಿ ಧೈರ್ಯ ನೀಡಿ. ಯಾವುದೇ ಕ್ಯಾಲ್ಕುಲೇಟರ್​ ಇತರ ವಿದ್ಯುತ್​ಚಾಲಿತ ಉಪಕರಣ ಒಯ್ಯುವಂತಿಲ್ಲ. ಕೇಂದ್ರಗಳ ಮುಖ್ಯ ಅಧೀಕ್ಷಕರು ಈ ಬಗ್ಗೆ ಎಚ್ಚರವಹಿಸುವಂತೆ ತಾಕೀತು ಮಾಡಿದರು.
ಡಿಡಿಪಿಐ ಸೋಮಶೇಖರಗೌಡ ಪಾಟೀಲ್​ ಮಾತನಾಡಿ, 23,001 ಹೊಸ ವಿದ್ಯಾರ್ಥಿಗಳು ಸೇರಿ 25,556 ಅಭ್ಯರ್ಥಿಗಳು ಪರೀೆಗೆ ನೋಂದಾಯಿಸಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ 23, ಕೊಪ್ಪಳ 21, ಕುಷ್ಟಗಿ 15 ಹಾಗೂ ಯಲಬುರ್ಗಾ ತಾಲೂಕಿನ 14 ಒಟ್ಟು 74 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪ್ರತಿ ಸೆಂಟರ್​ಗೆ ಒಬ್ಬ ಮುಖ್ಯ ಅಧೀಕ್ಷಕ ಹಾಗೂ ಪ್ರಶ್ನೆಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ. ಆಯಾ ಬಿಇಒಗಳು ಅವರ ತಾಲೂಕಿನ ಪ್ರಶ್ನೆ ಪತ್ರಿಕೆ ಪಾಲಕರಾಗಿರುವರು. ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರಿಗೆ ಮಾರ್ಗಸೂಚಿ ನೀಡಲಾಗಿದೆ. ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾಗಿ ವಿವರಿಸಿದರು.
ಡಿಡಿಪಿಯು ಜಗದೀಶ ಜಿ.ಎಚ್​., ಮುನಿರಾಬಾದ್ಡಯೇಟ್​ ಪ್ರಾಚಾರ್ಯ ಅನಂತಕುಮಾರ, ಬಿಇಒಗಳು, ನೋಡಲ್​ ಅಧಿಕಾರಿಗಳು ಇದ್ದರು.