ಕನಕಗಿರಿ ತಾಲೂಕಿನ ಘಡಿವಡಕಿ ಗ್ರಾಮದಲ್ಲಿ ಗುರುವಾರ ಶ್ರೀ ಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಮಹಿಳೆಯರು ತೇರು ಎಳೆದರು. 
ಕೊಪ್ಪಳ

ತೇರು ಎಳೆದು ಭಕ್ತಿ ಮೆರೆದ ಮಹಿಳೆಯರು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಘಡಿವಡಕಿ ಗ್ರಾಮದಲ್ಲಿ ವಿಶಿಷ್ಟ ಆಚರಣೆ
  • ಶ್ರೀಕ್ಷ್ಮೀದೇವಿ ಜಾತ್ರೆ ಸಂಪನ್ನ
ಕನಕಗಿರಿ: ತಾಲೂಕಿನ ಘಡಿವಡಕಿ ಗ್ರಾಮದ ಶ್ರೀಕ್ಷ್ಮೀದೇವಿ ಜಾತ್ರೆ ನಿಮಿತ್ತ ಗುರುವಾರ ಮಹಿಳೆಯರಿಂದ ರಥೋತ್ಸವ ಜರುಗಿತು.
ಬೆಳಗ್ಗೆ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ನೈವೈದ್ಯ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ ಗೋಧೂಳಿ ಸಮಯದಲ್ಲಿ ರಥೋತ್ಸವ ಜರುಗಿತು.
ಮಹಿಳೆಯರು ಪಾದಗಟೆವರೆಗೆ ತೆರು ಎಳೆದು ಮರಳಿ ದೇವಸ್ಥಾನದ ಪಾದಗಟ್ಟೆಗೆ ತಲುಪಿಸಿದರು. ನೆರೆದಿದ್ದ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ದೇವಿಗೆ ಜೈಕಾರ ಹಾಕಿದರು. ವಿಭಿನ್ನ ಆಚರಣೆಗೆ ಹೆಸರಾಗಿರುವ ಘಡಿವಡಕಿ ಜಾತ್ರೆಗೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಭಕ್ತರು ಆಗಮಿಸಿದ್ದರು. ಸುತ್ತಮುತ್ತಲಿನ ನಾನಾ ಗ್ರಾಮಗಳ ನೂರಾರು ಮಹಿಳೆಯರು ತೇರನ್ನೆಳೆದು ಸಂಭ್ರಮಿಸಿದರು.

ರಥದಿಂದ ಮಾತೆ ಮಡಿಲಿಗೆ ಮಗು?

ಹರಕೆ ಹೊತ್ತ ಪಾಲಕರು ಶಿಶುಗಳನ್ನು ರಥದ ಮೇಲಿಂದ ಕೆಳಕ್ಕೆ ಬಿಡುವ ವಿಶಿಷ್ಟ ಆಚರಣೆ ನಡೆಯಿತು. ರಥೋತ್ಸವ ದಿನದಂದು ಶ್ರೀ ಲಕ್ಷ್ಮೀದೇವಿಗೆ ಮಕ್ಕಳ ದರ್ಶನ ಮಾಡಿಸಿ ಮಗುವನ್ನು ರಥದ ಮೇಲಿಂದ ತಾಯಂದಿರ ಉಡಿಯಲ್ಲಿ ಎಸೆಯಲಾಯಿತು. ಈ ಸಂಪ್ರದಾಯ ಕಂಡು ಭಕ್ತರು ಬೆರಾಗದರು. ಇನ್ನೊಂದೆಡೆ ರಥೋತ್ಸವ ಆರಂಭವಾಗುವ ಮುನ್ನ ರಥಬೀದಿಯಲ್ಲಿ ಚಿಕ್ಕಮಕ್ಕಳಿಂದ ಉರುಳು ಸೇವೆಯೂ ನಡೆಯಿತು.