ಗಂಗಾವತಿ ತಾಲೂಕಿನ ಢಣಾಪುರದ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ 59ನೇ ವರ್ಷದ ಜಾತ್ರಾಮಹೋತ್ಸವ ನಿಮಿತ್ತ ಮಹಾರಥೋತ್ಸವ ನಿಮಿತ್ತ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರ ತುಲಾಭಾರ ನೆರವೇರಿಸಲಾಯಿತು.
- ಸಾಮೂಹಿಕ ವಿವಾಹ ಕಾರ್ಯಕ್ರಮ
- ಗಂಗಾವತಿ ಢಣಾಪುರ ಕಲ್ಲಯ್ಯಜ್ಜ ತುಲಾಭಾರ ಸೇವೆ
ಗಂಗಾವತಿ: ತಾಲೂಕಿನ ಢಣಾಪುರ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ 59ನೇ ವರ್ಷದ ಜಾತ್ರಾಮಹೋತ್ಸವ ನಿಮಿತ್ತ ಮಹಾರಥೋತ್ಸವ ಮತ್ತು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಶ್ರೀ ಶರಣಬಸವೇಶ್ವರ ಮೂರ್ತಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ, ಹೋಮ, ಪ್ರಸಾದ ವಿತರಣೆ ನಡೆಯಿತು. ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದು, ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಅವರಿಗೆ ಚವ್ಹಾಣ ಕುಟುಂಬದಿಂದ ತುಲಾಭಾರ ನೆರವೇರಿಸಲಾಯಿತು.
ಜಾತ್ರಾಮಹೋತ್ಸವ ನಿಮಿತ್ತ ಜರುಗಿದ ಹುಬ್ಬಳ್ಳಿ ಸಿದ್ಧಾರೂಢರ ಪುರಾಣ ಪ್ರವಚನ ಮಂಗಲ ನೆರವೇರಿಸಲಾಯಿತು.
ಬುಕ್ಕಸಾಗರದ ಕರಿಸಿದ್ದೇಶ್ವರ ಸ್ವಾಮೀಜಿ, ಅಯೋಧ್ಯ ಹಾಲಗಂಗಾಧರ ಸ್ವಾಮೀಜಿ, ತಿರುಪತೆಪ್ಪ ತಾತ ನಂದೆಳ್ಳಿ, ರೇವಣಸಿದ್ದಯ್ಯಸ್ವಾಮಿ, ಪ್ರಮುಖರಾದ ಸಿ.ಎಚ್.ಮಲ್ಲನಗೌಡ, ಬಿ.ಕೀರಪ್ಪ , ಈ.ಚಿದಾನಂದಪ್ಪ , ಟಿ.ನಾಗಪ್ಪ , ಈರಪ್ಪ ,ಎಚ್.ಮಂಜುನಾಥ್, ಎಂ.ಪಿ.ಪಂಪನಗೌಡ, ಸಿ.ಎಚ್ ವಿರೂಪಾಕ್ಷಗೌಡ, ಪಿ.ಪಿ. ಶರಣೇಗೌಡ, ಬಿ.ದೊಡ್ಡನಗೌಡ , ಸಿ.ಎಚ್.ಶೇಖರಗೌಡ, ಸಿ.ಎಚ್ ರುದ್ರಗೌಡ, ಕೆ.ಚನ್ನಯ್ಯಸ್ವಾಮಿ, ಹಾವನಗೌಡ ಇತರರಿದ್ದರು.
ಸಿಂಗನಾಳ: ತಾಲೂಕಿನ ಸಿಂಗನಾಳದದಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಧಾರ್ಮಿಕ ಸಭೆ ನಡೆಯಿತು. ಮೂರ್ತಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಭಜನೆ ಮತ್ತು ಅನ್ನಸಂತರ್ಪಣೆ ಜರುಗಿತು. ಎರಡು ಜೋಡಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಪ್ರಮುಖರಾದ ಸಿಂಗನಾಳ ಷಣ್ಮುಖಪ್ಪ ಸಾಹುಕಾರ್, ಎನ್.ವೀರಭದ್ರಗೌಡ, ಕನಕರೆಡ್ಡಿ, ತಿಮ್ಮಣ್ಣ, ಶರಣಬಸವ, ಮಲ್ಲಿಕಾರ್ಜುನ ಇತರರಿದ್ದರು.