ಭಾಗ್ಯನಗರದ ಶ್ರೀ ಶಂಕರಚಾರ್ಯರ ಮಹಾರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು. 
ಕೊಪ್ಪಳ

ಶ್ರೀ ಶಂಕರಾಚಾರ್ಯರ ರಥೋತ್ಸವ ಅದ್ದೂರಿ

ಪ್ರಮುಖ ಮುಖ್ಯಾಂಶಗಳು

  • ಭಕ್ತಿಪೂರ್ವಕ
  • ಮೆರವಣಿಗೆ
  • ಶಂಕರಾಚಾರ್ಯರ
ಕೊಪ್ಪಳ: ತಾಲೂಕಿನ ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠದ ಆವರಣದಲ್ಲಿ ಮಂಗಳವಾರ ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಠದಿಂದ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತಿಪೂರ್ವಕ ಮೆರವಣಿಗೆಯ ಮೂಲಕ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಜೆ ಗೋಧೂಳಿ ಸಮಯದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಥ ಸಾಗುವ ಸಂದರ್ಭದಲ್ಲಿ ಭಕ್ತರು ಉತ್ಸಾಹದಿಂದ ೋಷಣೆಗಳನ್ನು ಕೂಗಿ ಭಕ್ತಿ ಭಾವ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಶಂಕರಾಚಾರ್ಯರ ಮೂರ್ತಿಗೆ ವಿಶೇಷ ಅಲಂಕಾರ ವಾಡಲಾಗಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ವಾಡಲಾಗಿತ್ತು. ಜಾತ್ರೆಗೆ ಸುತ್ತ ಮುತ್ತಲಿನ ಭಕ್ತರು ಬಂದು ಶ್ರೀ ಶಂಕರಾಚಾರ್ಯರ ಕೃಪೆಗೆ ಪಾತ್ರರಾದರು.
ಜಮಖಂಡಿಯ ಸಹಜಾನಂದ ಸ್ವಾಮಿ, ಬೀದರಿನ ಗಣೇಶಾನಂದ ಮಹಾರಾಜ್, ಕೃಷ್ಣಾನಂದ ಅವಧೂತರು, ಜ್ಞಾನಾನಂದ ಮಹಾರಾಜರು, ಶಿವರಾವಾನಂದ ಭಾರತಿ ಸ್ವಾಮೀಜಿ, ಸ್ವರೂಪಾನಂದ ಸ್ವಾಮೀಜಿ, ಅನುಸೂಯಾ ದೇವಿ ಅಮ್ಮ ಹಾಗೂ ಆನಂದಮಯಿ ಅಮ್ಮನವರು ಸೇರಿದಂತೆ ಹಲವು ಧಾರ್ಮಿಕ ಗುರುಗಳು ಸಾನ್ನಿಧ್ಯ ವಹಿಸಿದ್ದರು.
ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಮುಖಂಡರಾದ ಕೃಷ್ಣಾ ಪಾನಂಟಿ, ನಾಗೂಸಾ ಮೇರಾಜ್, ಜವಾಹರಲಾಲಸಾ ಅಂಟಾಳಮರದ, ಚಂದ್ರು ವಾಳ್ವಾದಿ ಇತರರಿದ್ದರು.
ಮೂರ್ತಿ ಪ್ರತಿಷ್ಠಾಪನೆ: ಸೋಮವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅಭಿಷೇಕದೊಂದಿಗೆ ಶ್ರೀ ಶಾರದಾಂಬಾ ಮೂರ್ತಿ ಪ್ರತಿಷ್ಠಾಪನೆ. ನೂತನ ದೇವಸ್ಥಾನ ಉದ್ಘಾಟನೆ ಜರುಗಿತು. ಪ್ರತಿಷ್ಠಾಂಗ ಹೋಮ, ಚಂಡಿಹೋಮ, ಡಾ.ಶಿವಾನಂದ ಭಾರತಿ ಸ್ವಾಮೀಜಿ, ಶಿವಕುವಾರ ಸ್ವಾಮೀಜಿ ಅಮೃತಾಸ್ತದಿಂದ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನಡೆಯಿತು. ಮಂಗಳವಾರ ಶಂಕರಾಚಾರ್ಯ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಶಾರದಾಂಬಾ ಶಾಲಾ ವಿದ್ಯಾರ್ಥಿ ಕೊಠಡಿಗಳನ್ನು ಶಾಸಕ ಕೆ.ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ್ ಉದ್ಘಾಟಿಸಿದರು. ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್, ಬಿಜೆಪಿ ಪ್ರಮುಖ ಡಾ.ಬಸವರಾಜ ಕ್ಯಾವಟರ್ ಸಾಥ್ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ವಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.