ಕಾತರಕಿ-ಗುಡ್ಲಾನೂರ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ವಿರೂಪಾಕ್ಷಗೌಡ್ರು, ಯಲ್ಲನಗೌಡ, ಬಸವರಾಜ, ಸಿದ್ದನಗೌಡ ಇತರರಿದ್ದರು. 
ಕೊಪ್ಪಳ

ಕ್ರೀಡೆಯಿಂದ ಶಿಸ್ತು, ದೈಹಿಕ ಕ್ಷಮತೆ, ಸಮಯಪ್ರಜ್ಞೆ

ಅಳವಂಡಿ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವ ಅಗತ್ಯವಿದೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ್ರು ಪೊಲೀಸ್‌ಪಾಟೀಲ್ ಹೇಳಿದರು.

ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಭಗತ್ ಸಿಂಗ್ ಗೆಳೆಯರ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಭಾನುವಾರ ಮಾತನಾಡಿದರು. ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. 
ಯುವ ಪ್ರತಿಭೆಗಳಿಗೆ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿವೆ. ಕ್ರೀಡೆಯು ಶಿಸ್ತು, ಸಮಯಪ್ರಜ್ಞೆ, ದೈಹಿಕ ಕ್ಷಮತೆ ಹಾಗೂ ನಾಯಕತ್ವ ಗುಣ ಬೆಳೆಸುತ್ತದೆ ಎಂದರು. ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಕುಂದರಗಿ ಖೋಖೋ ತಂಡ ಪ್ರಥಮ ಸ್ಥಾನ ಪಡೆದರೆ, ಹನುಮಸಾಗರ ತಂಡ-ದ್ವಿತೀಯ, ಬೂದುಗುಂಪಾ ತಂಡ ತೃತಿಯ ಸ್ಥಾನ ಪಡೆಯಿತು. 
ಪ್ರಮುಖರಾದ ಯಲ್ಲನಗೌಡ ಮಾಲಿಪಾಟೀಲ್, ಬಸವರಾಜ ಅಂಗಡಿ, ಸಿದ್ದನಗೌಡ ಹಿರೇಗೌಡ್ರು, ವಿಶ್ವಾನಾಥಗೌಡ, ನಾಗನಗೌಡ ನಾಗನಗೌಡ್ರು, ಬಸವರಾಜ ಉಳ್ಳಾಗಡ್ಡಿ, ಅಂದಪ್ಪ ಬೇವಿನಾಳ, ಗಿರೀಶ ಮಾಲಿಪಾಟೀಲ್, ಗವಿ ಮುಂಡಾಸಾದ, ರವಿ ಕಾಳಿ, ನಾಗರಾಜ ತಳಗೇರಿ, ಕಾಸಿಂಸಾಬ್ ಕೋಲ್ಕರ, ಮಂಜುನಾಥ, ಶರತ, ಗವಿ, ಮರಿಯಪ್ಪ ಇತರರಿದ್ದರು.