ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸಪ್ರಾಶಾಶಿ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಪ್ರಮುಖರಾದ ಭೀಮಪ್ಪ, ಎಸ್.ಬಿ.ಕುರಿ, ಸುಭಾಷ್, ಹನುಮಂತಪ್ಪ ನಿಂಗಪ್ಪ, ಯಂಕಣ್ಣ, ಮಾರುತಿ ಇತರರಿದ್ದರು. 
ಕೊಪ್ಪಳ

ಸ್ಪರ್ಧಾತ್ಮಕ ಮನೋಭಾವಕ್ಕೆ ಕ್ರೀಡೆ ಸಹಕಾರಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಸಪ್ರಾಶಾಶಿ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಅಭಿಮತ
  • ಅಳವಂಡಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
ಅಳವಂಡಿ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಹೇಳಿದರು.
ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.
ಉಪ ಪ್ರಾಚಾರ್ಯ ಎಸ್.ಬಿ.ಕುರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಫಲಿತಾಂಶಕ್ಕಿಂತ ಭಾಗವಹಿಸುವ ಮನೋಭಾವ ಮುಖ್ಯ. ಕ್ರೀಡಾ ಚಟುವಟಿಕೆಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮತ್ತು ಧೈರ್ಯ ಬೆಳೆಸುತ್ತವೆ ಎಂದರು.
ಸಪ್ರಾಶಾಶಿ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಕುರಿ, ಮುಖ್ಯಶಿಕ್ಷಕ ಸುಭಾಷ್ ಅಂಗಡಿ, ಸಿಆರ್‌ಪಿ ನಾಗರಾಜ, ಪ್ರಮುಖರಾದ ನಿಂಗಪ್ಪ ಯತ್ನಟ್ಟಿ, ಯಂಕಣ್ಣ ಕೊಳ್ಳಿ, ರೇವಣಸಿದ್ದನಗೌಡ, ಬಸವರಡ್ಡಿ, ರೇವಪ್ಪ, ಶೇಖರಪ್ಪ, ಮಾರುತಿ ಮೇಗಳಮನಿ, ಸುರೇಶ ಅರಕೇರಿ, ಗುರುಸ್ವಾಮಿ, ವಿರೂಪಾಕ್ಷಪ್ಪ, ದೇವೇಂದ್ರಪ್ಪ, ಆನಂದ, ಹೊಳಿಬಸಯ್ಯ, ರಮೇಶ ಬುಡ್ಡನಗೌಡ್ರ, ಮಾರುತಿ, ರುದ್ರಪ್ಪ, ದೇವರಡ್ಡಿ, ಚಳ್ಳಪ್ಪ, ಮರುಳುಸಿದ್ದಯ್ಯ, ಶಿವಾನಂದಪ್ಪ, ರಮೇಶ, ಮರುಳುಸಿದ್ದಪ್ಪ, ಬಸಣ್ಣ, ಮೀನಾಕ್ಷಿ, ಸುಭಾಷ್ ರೆಡ್ಡಿ, ಮಲ್ಲಪ್ಪ ಗುಡದಣ್ಣನವರ ಇತರರಿದ್ದರು.