ಎಳ್ಳಮಾವಾಸ್ಯೆ ನಿಮಿತ್ತ ಅಳವಂಡಿಯಲ್ಲಿ ರೈತರು ಎತ್ತಿನಬಂಡಿಯಲ್ಲಿ ಜಮೀನಿಗೆ ತೆರಳುತ್ತಿರುವುದು. 
ಕೊಪ್ಪಳ

ಪಾಂಡವರಿಗೆ ವಿಶೇಷ ಪೂಜೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಪೂಜೆ
  • ಪಾಂಡವರಿಗೆ ಪೂಜೆ

ಪಾಂಡವರಿಗೆ ವಿಶೇಷ ಪೂಜೆ

ಅಳವಂಡಿ: ಪ್ರಸಕ್ತ ವರ್ಷ ಅಳವಂಡಿ ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದು, ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಕುಟುಂಬಸ್ಥರೊಂದಿಗೆ ಊಟ ಸವಿದು ಶುಕ್ರವಾರ ಎಳ್ಳಮಾವಾಸ್ಯೆ ಆಚರಿಸಿದರು.
ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಇತರ ಬೆಳೆಗಳ ಮಧ್ಯೆ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಾಂಡವರನ್ನು ಮಾಡಿ ಪೂಜೆ ಸಲ್ಲಿಸಿದರು. ನಂತರ ಎಲ್ಲ ಬಗೆಯ ತಿನಿಸುಗಳ ತುಣುಕನ್ನು ಒಂದು ಪಾತ್ರೆಯಲ್ಲಿ ಹಾಕಿ ಹುಲಿಗ್ಯೋ ಹುಲಿಗ್ಯೋ ಎಂದು ಹೊಲದ ತುಂಬಾ ಚರಗ ಚೆಲ್ಲಿದರೆ ಹಿಂದೆ ಒಬ್ಬರು ‘ಚಲಂಬ್ರಿಗೊ’ ಎಂದು ನೀರನ್ನು ಎರಚುತ್ತ ಪೂಜೆ ಸಲ್ಲಿಸಿದರು.
ರೈತರು ಕುಟುಂಬ ಸಮೇತ ಎತ್ತಿನಬಂಡಿ, ಕಾರು, ಟಾಂಟಾಂ, ಟ್ರಾೃಕ್ಟರ್, ದ್ವಿಚಕ್ರ ವಾಹನಗಳಲ್ಲಿ ಜಮೀನುಗಳಿಗೆ ತೆರಳಿ ಪೂಜೆ ನಂತರ ಮನೆಯಲ್ಲಿ ತಯಾರಿಸಿದ ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಎಣ್ಣಿ ಹೋಳಿಗೆ, ಕಾಯಿ ಹೋಳಿಗೆ, ಕರಿಗಡಬು, ಸಜ್ಜಿ ಹಾಗೂ ಜೋಳದ ಖಡಕ್ ರೊಟ್ಟಿ, ಕರ್ಚಿಕಾಯಿ, ಕಾಳು ಪಲ್ಯ, ತರಕಾರಿ ಪಲ್ಯ, ಚಟ್ನಿ, ಮೊಸರು ಸೇರಿ ವಿವಿಧ ಬಗೆಯ ಭಕ್ಷಗಳನ್ನು ಸವಿದರು.