ಕನಕಗಿರಿ ತಾಲೂಕಿನ ಮುಸಲಾಪುರದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪ್ರಮುಖರಾದ ದೇವರಾಜ ಅಂಬಾಡಿ, ರಾಮಣ್ಣ ದಲಾಲಿ, ಚನ್ನಪ್ಪ ವಂಕಲಕುಂಟಿ, ಚನ್ನಪ್ಪ ಕೊಳಜಿ, ಬಸವಂತಪ್ಪ ಕೊಳಜಿ ಇತರರಿದ್ದರು. 
ಕೊಪ್ಪಳ

ಭಾವಚಿತ್ರಕ್ಕೆ ವಿಶೇಷ ಪೂಜೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಡಾ.ಶಿವಕುಮಾರ ಸ್ವಾಮೀಜಿ

ಭಾವಚಿತ್ರಕ್ಕೆ ವಿಶೇಷ ಪೂಜೆ

ಕನಕಗಿರಿ: ತಾಲೂಕಿನ ಮುಸಲಾಪುದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಭಕ್ತರು ಹಾಗೂ ಮಠದ ಹಳೆಯ ವಿದ್ಯಾರ್ಥಿಗಳಿಂದ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ ಭಜನೆ ಜರುಗಿತು.
ಪ್ರಮುಖರಾದ ದೇವರಾಜ ಅಂಬಾಡಿ, ರಾಮಣ್ಣ ದಲಾಲಿ, ಚನ್ನಪ್ಪ ವಂಕಲಕುಂಟಿ, ಚನ್ನಪ್ಪ ಕೊಳಜಿ, ಬಸವಂತಪ್ಪ ಕೊಳಜಿ, ಬಸವರಾಜ ಹನುಮನಾಳ, ಬಸವರಾಜ ಹುಣಸಿಹಾಳ, ಈಶಪ್ಪ ಲಕ್ಕಂಪುರ, ಹನುಮೇಶ ಅಂಗಡಿ, ಭೀಮಣ್ಣ ಗಡಾದ, ಪ್ರಮುಖರಾದ ಮಂಜುನಾಥ ಮಾ.ಪಾ., ಹನುಮನಗೌಡ ಬೊಮ್ಮನಾಳ, ವೃಷಿಬೇಂದ್ರಗೌಡ ಮಾಲಿಪಾಟೀಲ್, ಲಿಂಗರಾಜ ಗುನ್ನಾಳ, ಜಾಕೀರ್ ಹುಸೇನ್ ಇತರರಿದ್ದರು.