ಗುರುಪೂರ್ಣಿಮಾ ನಿಮಿತ್ತ ಮರ್ಲಾನಹಳ್ಳಿ ಗ್ರಾಮದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಬುಧವಾರ ಬೆಳಗಿನ ಜಾವದಿಂದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು. ಭಕ್ತರು ಬಾಬಾ ದರ್ಶನ ಪಡೆದರು.
- ಬಾಬಾ ಮೂರ್ತಿಗೆ
- ವಿಶೇಷ
- ಅಲಂಕಾರ
ಕಾರಟಗಿ: ಗುರುಪೂರ್ಣಿಮೆ ನಿಮಿತ್ತ ಮರ್ಲಾನಹಳ್ಳಿ ಗ್ರಾಮದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಬುಧವಾರ ಬೆಳಗಿನ ಜಾವದಿಂದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು.
ಬೆಳಿಗ್ಗೆ ಸುಪ್ರಭಾತ ಸೇವೆ, ಸದ್ಗುರು ಸಾಯಿಬಾಬಾ ವಿಗ್ರಹಕ್ಕೆ ಮಹನ್ಯಾಸ ಪೂರ್ವಕ ವೇದ ಮಂತ್ರೋಚ್ಛಾರಣ ಮೂಲಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಂತರ ಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಲಕ್ಷಮಂತ್ರ ಪುಷ್ಪಾರ್ಚನೆ ನಂತರ ಬೆಳಗ್ಗೆ 10-35 ಕ್ಕೆ ಸಾಮೂಹಿಕ ಸಾಯಿ ವೃತ ಮತ್ತು ಗುರುಚರಿತ್ರ ಪಾರಾಯಣ, ಪಂಚಾರತಿ ವಿಶೇಷ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಅರ್ಚಕರಾದ ರಾಘವೇಂದ್ರ ಶರಫ್, ಗೋವರ್ಧನ್‌ಂ, ಮಾರುತಿ, ಮೋಹನ ನೇತೃತ್ವದಲ್ಲಿ ನಡೆಯಿತು.
ಮಹಿಳಾ ಭಜನಾ ಮಂಡಳಿಯವರಿಂದ ದೇವಸ್ಥಾನದಲ್ಲಿ ಸತ್ಯ ಸಾಯಿ ವೃತ ಹಾಗೂ ಅಖಂಡ ಸಾಯಿನಾಮ ಸಂಕೀರ್ತನೆ ಮತ್ತು ಶಿರಡಿ ಸಾಯಿ ನಾಮಪಠಣ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಸಾಯಿ ಬಾಬಾ ಟ್ರಷ್ಟ್‌ನ ಪದಾಧಿಕಾರಿಗಳು, ಸರ್ವಸದಸ್ಯರು ಗ್ರಾಮಸ್ಥರು ಸೇರಿದಂತೆ ಕಾರಟಗಿ ಸೇರಿ ಸುತ್ತಲಿನ ಪ್ರದೇಶದ ವಿವಿಧ ಗ್ರಾಮಗಳ ಭಕ್ತರು ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿದ್ದರು.