ಕುಕನೂರಿನ ಶ್ರೀ ಮಹಾಮಾಯಾ ದೇವಸ್ಥಾನಕ್ಕೆ ಸೋಮವಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ದರ್ಶನ ಪಡೆದರು. ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ, ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ಮಾರುತಿ ಗಾವರಾಳ ಇದ್ದರು. 
ಕೊಪ್ಪಳ

ಶ್ರೀ ಮಾಹಾಮಾಯಾ ದೇವಿ ದರ್ಶನ

ಕುರುವತ್ತಿ ಶ್ರೀಕಾಂತಪ್ಪ
ಕುಕನೂರು: ಪಟ್ಟಣದ ಶ್ರೀ ಮಹಾಮಾಯಾ ದೇವಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸೋಮವಾರ ದರ್ಶನ ಪಡೆದರು. ಶ್ರೀಮಾತೆ ಬೊಮ್ಮಾಯಿ ಅವರ ಮನೆ ದೇವರಾದ ಹಿನ್ನೆಲೆಯಲ್ಲಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ರಾಜ್ಯದಲ್ಲಿ ಮಳೆ ಅಭಾವದಿಂದ ರೈತ ವರ್ಗ ಬರಸ್ಥಿತಿ ಎದುರಿಸಬೇಕಾಗಿದೆ. ರಾಜ್ಯ ಮಟ್ಟದಲ್ಲಿ ಬರ ಪರಿಹಾರಕ್ಕಾಗಿ ಧ್ವನಿ ಎತ್ತಲಾಗುವುದು. ಬರ ಘೋಷಣೆ ಮಾಡಿ ರೈತರ ಪರ ನಿಲ್ಲುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ, ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ಮಾರುತಿ ಗಾವರಾಳ, ವೀರಣ್ಣ ಹುಬ್ಬಳ್ಳಿ, ಅಂದಪ್ಪ ಜವಳಿ, ಕರಬಸಯ್ಯ ಬಿನ್ನಾಳ, ರಮೇಶ ಶಾಸ್ತ್ರೀ, ಲಕ್ಷ್ಮಣ ಕಾಳಿ ಇತರರಿದ್ದರು.