ಕಂಪಸಾಗರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಭಕ್ತರು ವಿಶೇಷ ಭಜನೆ ನಡೆಸಿದರು. ಶ್ರೀಶೈಲ ಮಲ್ಲಿಕಾರ್ಜುನ ಮಠದ ನಾಗಭೂಷಣ ದೇಶಿಕರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯ ಹನುಮಂತಪ್ಪ, ಡಿ.ನಾಗರಾಜ್, ಈಶಪ್ಪ, ಹನುಮಂತಪ್ಪ ಇತರರಿದ್ದರು. 
ಕೊಪ್ಪಳ

ಮಲ್ಲಿಕಾರ್ಜುನ ಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಮಳೆಗಾಗಿ ಪ್ರಾರ್ಥಿಸಿ ವಿಶೇಷ ಭಜನೆ
ಮುನಿರಾಬಾದ್: ಕಂಪಸಾಗರ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಶಾಖಾಮಠದಲ್ಲಿ ಸೋಮವಾರ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಳೆಗಾಗಿ ಪ್ರಾರ್ಥಿಸಿ ಭಕ್ತರು ವಿಶೇಷ ಭಜನೆ ನಡೆಸಿದರು. ಶ್ರೀ ಮಠದ ನಾಗಭೂಷಣ ದೇಶಿಕರು, ಪ್ರಮುಖರಾದ ಅಂಜಿನಪ್ಪ ಬೆಂಕಿ, ಚಿದಾನಂದಯ್ಯ, ಹುಲಗಪ್ಪ ಚೌರದ, ಬಸವರಾಜ್, ಸಿ.ಕಲ್ಲೇಶ್, ಶ್ರೀದುರ್ಗಾದೇವಿ ಭಜನಾ ಮಂಡಳಿಯ ಹನುಮಂತಪ್ಪ, ಡಿ.ನಾಗರಾಜ್, ಈಶಪ್ಪ, ಹನುಮಂತಪ್ಪ ಇತರರಿದ್ದರು.