ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದಲ್ಲಿ ಗುರುಪೂರ್ಣಿಮೆ ನಿಮಿತ್ತ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿಗೆ ಭಕ್ತರು ತುಲಾಭಾರ ಸೇವೆ ನೆರವೇರಿಸಿದರು. ಪ್ರಮುಖರಾದ ಕಣ್ಣಿ ಶ್ರೀಕಂಠ, ಉಮಾದೇವಿ, ಶ್ರೀನಿವಾಸ ಇತರರಿದ್ದರು. 
ಕೊಪ್ಪಳ

ಗುರುಪೂರ್ಣಿಮೆ ನಿಮಿತ್ತ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಭಜನೆ
  • ಸಾಮೂಹಿಕ
  • ಅನ್ನಸಂತರ್ಪಣೆ
ಗಂಗಾವತಿ: ಸಾಯಿನಗರ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರುಪೂರ್ಣಿಮೆ ನಿಮಿತ್ತ ವಿಶೇಷ ಪೂಜೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ಕಾಕಡಾರತಿಯೊಂದಿಗೆ ವಿಶೇಷ ಪೂಜೆ ಶುರುವಾಗಿದ್ದು, ಜಲಾಭಿಷೇಕ, ಪಂಚಾಮೃತಾಭಿಷೇಕ, ಬೆಳ್ಳಿ ಕವಚ ಧಾರಣೆ, ಹೂವಿನ ಅಲಂಕಾರ, ಭಜನೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಗುರುಪೂರ್ಣಿಮೆ ಮಹತ್ವ ಕುರಿತು ಅರ್ಚಕ ವೆಂಕಟೇಶ ಜೋಶಿ ಮಾಹಿತಿ ನೀಡಿದರು.
ಮಾಜಿ ಶಾಸಕರಾದ ಪರಣ್ಣಮುನವಳ್ಳಿ, ಜಿ.ವೀರಪ್ಪ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಪ್ರಮುಖರಾದ ಸಿಂಗನಾಳ ಬಸವರಾಜ, ರಾಮಕೃಷ್ಣ, ಪದ್ಮನಾಭ ಚಿನ್ನೂರು ಇತರರಿದ್ದರು.
ಆನೆಗೊಂದಿ: ತಾಲೂಕಿನ ಆನೆಗೊಂದಿ ವಾಲಿಕಿಲ್ಲಾಮ್ಯಾಗೋಟದ ಆದಿಶಕ್ತಿ ದೇವಾಲಯದಲ್ಲಿ ಗುರುಪೂರ್ಣಿಮೆ ನಿಮಿತ್ತ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಚಂಡಿ ಹೋಮ ನೆರವೇರಿಸಲಾಯಿತು. ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಸ್ವಾಮೀಜಿಗೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ತುಲಾಭಾರ ನೆರವೇರಿಸಿದರು. ಪ್ರಮುಖರಾದ ಕಣ್ಣಿ ಶ್ರೀಕಂಠ, ಉಮಾದೇವಿ ಶ್ರೀನಿವಾಸ, ದೇವೇಂದ್ರ,ಸಿಂಧು ಇತರರಿದ್ದರು.