ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಗಣಿತ ಮತ್ತು ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಗುರುವಾರ ಮಾತನಾಡಿದರು. ಧಾರವಾಡ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪರ್ವತಲು, ಐಕ್ಯೂಎಸಿ ಮುಖ್ಯಸ್ಥ ಡಾ. ಕೆ.ಎಸ್. ಮಂಜುನಾಥ ಇತರರಿದ್ದರು. 
ಕೊಪ್ಪಳ

ಗಣಿತದಲ್ಲಿ ಸಾಧಿಸಿದರೆ ಅಗಣಿತ ಅವಕಾಶ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಹೇಳಿಕೆ
ಗಂಗಾವತಿ: ಸರ್ವ ಕ್ಷೇತ್ರ ವ್ಯಾಪಿಸಿಕೊಂಡಿರುವ ಗಣಿತಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು, ಕೌಶಲದೊಂದಿಗೆ ಉನ್ನತ ಸಾಧನೆ ಮಾಡುವಂತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಗಣಿತ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಗಣಿತ ಮತ್ತು ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಷಿ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ರಾಕೆಟ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಗಣಿತ ವಿಷಯಕ್ಕೆ ಆದ್ಯತೆಯಿದ್ದು, ಅಧ್ಯಯನ ಮೂಲಕ ಗಣಿತದಲ್ಲಿ ಸಾಧನೆ ಮಾಡಬಹುದಾಗಿದೆ. ಕಾಲೇಜಿನಲ್ಲಿ ಕಲಿತಾವಾತಾವರಣಕ್ಕೆ ಪೂರಕ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಧಾರವಾಡ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪರ್ವತಲು ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಗುಂಪು ಚರ್ಚೆಗಳ ಮೂಲಕ ಗಣಿತ ವಿಷಯದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ. ಇಂದಿನ ದಿನಗಳಲ್ಲಿ ಗಣಿತಕ್ಕಿರುವ ಮಹತ್ವ ಯಾವ ವಿಷಯಕ್ಕೂ ಇಲ್ಲ ಎಂದರು.
ಐಕ್ಯೂಎಸಿ ಮುಖ್ಯಸ್ಥ ಡಾ.ಕೆ.ಎಸ್. ಮಂಜುನಾಥ, ಭೌತಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಣ್ಣೋಜಿರೆಡ್ಡಿ, ಗಣಿತ ವಿಭಾಗದ ಮುಖ್ಯಸ್ಥ ಅಶೋಕ ನಾಯಕ, ಉಪನ್ಯಾಸಕಿಯರಾದ ನೇತ್ರಾ ಸಜ್ಜನ್, ಚಂದನಾ, ಶರಣಬಸವ ಸುನೀತಾ ಇತರರಿದ್ದರು.