ಗಂಗಾವತಿ ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ವಿವಿಧ ಭಜನಾ ಮಂಡಳಿ ಸದಸ್ಯರ ನೇತೃತ್ವದಲ್ಲಿ ಅಧಿಕ ಮಾಸದ ನಿಮಿತ್ತ 33 ಹಾಡುಗಳ ವಿಶೇಷ ಸಂಕೀರ್ತನೆ ಜರುಗಿತು. 
ಕೊಪ್ಪಳ

33 ಹಾಡುಗಳ ವಿಶೇಷ ಸಂಕೀರ್ತನೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಧಿಕ ಮಾಸ
  • ಶ್ರೀ ಸತ್ಯನಾರಾಯಣ ದೇವಾಲಯ
ಗಂಗಾವತಿ: ನಗರದ ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಅಧಿಕ ಮಾಸದ ನಿಮಿತ್ತ 33 ಹಾಡುಗಳ ವಿಶೇಷ ಸಂಕೀರ್ತನೆ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ವಿಜಯಧ್ವಜ ಮತ್ತು ಸತ್ಯದೇವೇಶ ಭಜನಾ ಮಂಡಳಿಯಿಂದ ಶ್ರೀ ಪುರಂದರದಾಸರ ರಚನೆಯ ದಾಸಸಾಹಿತ್ಯದ ಸಂಕೀರ್ತನೆ ಕಾರ್ಯಕ್ರಮ 15 ದಿನಗಳವರೆಗೂ ಮುಂದುವರಿಯಲಿದೆ.
ಪ್ರತಿನಿತ್ಯ ಸಂಜೆ 2 ಗಂಟೆಗಳ ಕಾಲ ನಡೆಯುವ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಅಧಿಕ ಮಾಸದ ವಿಶೇಷತೆ ಮತ್ತು ದಾನದ ಕುರಿತು ವಿಜಯಧ್ವಜ ವಿದ್ಯಾಪೀಠದ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ. ದೇವಾಲಯದ ಪ್ರಮುಖ ವಾದಿರಾಜಾಚಾರ್ ಕಲ್ಮಂಗಿ, ಅರ್ಚಕ ಶ್ರೀಧರಾಚಾರ್ ರಾಜಪುರೋಹಿತ, ವಿಜಯೀಂದ್ರಾಚಾರ್, ಶ್ಯಾಮಾಚಾರ್ ಇತರರಿದ್ದರು.