ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
- ಉಪನ್ಯಾಸಕರ ಸಭೆಯಲ್ಲಿ ತೀರ್ಮಾನ
ಕೊಪ್ಪಳ : ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಕ್ಕೆ 2026-&31ನೇ ಸಾಲಿಗೆ ಆಯ್ಕೆಗಾಗಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಉಪನ್ಯಾಸಕರ ಸಭೆಯಲ್ಲಿ ಚರ್ಚಿಸಿ ಉಪನ್ಯಾಸಕ ಸೋಮಶೇಖರಗೌಡ ಅವರನ್ನು ಸಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಚುನಾವಣೆಯನ್ನು ಬಯಸದೆ. ಹಿಂದಿನ ಪರಂಪರೆಯಂತೆ ಒಮ್ಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದಾಗಿ ತೀಮಾರ್ನಿಸಿ. ಉಪಾಧ್ಯಕ್ಷರಾಗಿ ಡಾ.ಪ್ರಿಯದರ್ಶಿನಿ, ಪ್ರಧಾನಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಳಗುಂದಿ, ಕೋಶಧ್ಯಕ್ಷರಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಧ್ಯಕ್ಷರಾಗಿ ಮಾರುತಿ ಲಕಮಾಪುರ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಯಂಕಪ್ಪ ಗೊಲ್ಲರ್, ಕಾರ್ಯದರ್ಶಿಯಾಗಿ ಅಮರೇಶ ದೇವರಾಳ, ಜಂಟಿಕಾರ್ಯದರ್ಶಿಯಾಗಿ ಬಸವರಾಜ ಗುಂಗಾಡಿ ಹಾಗೂ ಸಂಚಾಲಕರನ್ನಾಗಿ ತಿರುಪತಿ ನಾಯಕ್ ಇವರನ್ನು ಅವಿರೋಧವಾಗಿ ಸಭೆಯಲ್ಲಿ ಆಯ್ಕೆಮಾಡಲಾಯಿತು. ಈ ಸಭೆಯಲ್ಲಿ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಸುಮಾರು 150ಕ್ಕೂ ಹೆಚ್ಚಿನ ಉಪನ್ಯಾಸಕರು ಭಾಗವಹಿಸಿದ್ದರು.