ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಕಡೇಬಾಗಿಲು ಹೊರವಲಯದ ಘನತಾಜ್ಯ ನಿರ್ವಹಣೆ ಘಟಕಕ್ಕೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬ್ಳೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಎನ್‌ಆರ್‌ಎಲ್‌ಎಂ ಯೋಜನೆ ಜಿಲ್ಲಾ ಯೋಜನಾ ವ್ಯವಸ್ಥಾಪಕ ಅಂಬಣ್ಣ, ಎಸ್‌ಬಿಎಂ ಜಿಲ್ಲಾ ಸಯೋಜಕಿ ಬಸಮ್ಮ ಇತರರಿದ್ದರು.
- ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬ್ಳೆ ಸಲಹೆ
ಗಂಗಾವತಿ: ಘನತ್ಯಾಜ್ಯ ವಿಲೇವಾರಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಬೇಕಿದ್ದು, ಹಸಿ ಮತ್ತು ಒಣ ಕಸ ಪ್ರತ್ಯೇಕಿಸುವಂತೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬ್ಳೆ ಸಲಹೆ ನೀಡಿದರು.
ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಕಡೇಬಾಗಿಲು ಹೊರವಲಯದ ಘನತಾಜ್ಯ ನಿರ್ವಹಣೆ ಘಟಕಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಘನತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕ ನಿರ್ವಹಣೆಯಾಗಬೇಕಿದ್ದು, ನಿತ್ಯವೂ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ಸಂಗ್ರಹವಾಗಬೇಕು. ಮನೆ ಮತ್ತು ಅಂಗಡಿಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಬೇಕು. ಸ್ವಸಹಾಯ ಸಂಘದ ಸದಸ್ಯರು ಪ್ರತಿ ತಿಂಗಳು ಸಾರ್ವಜನಿಕರಿಂದ ಸೇವಾ ಶುಲ್ಕ ಕಡ್ಡಾಯ ಪಡೆಯಬೇಕು. ಜಿಲ್ಲೆಯಲ್ಲಿ ಮಾದರಿ ಘಟಕವಾಗಬೇಕಿದ್ದು, ಸಿಬ್ಬಂದಿ ಒಗ್ಗೂಡಿ ನಿರ್ವಹಿಸಬೇಕು. ಘಟಕಕ್ಕೆ ಬೇಕಾದ ನೀರು, ವಿದ್ಯುತ್ ಇತರ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದರು.
ತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ ಮತ್ತು ನಿರ್ವಹಣೆ ಕುರಿತು ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಎನ್‌ಆರ್‌ಎಲ್‌ಎಂ ಯೋಜನೆ ಜಿಲ್ಲಾ ಯೋಜನಾ ವ್ಯವಸ್ಥಾಪಕ ಅಂಬಣ್ಣ, ಎಸ್‌ಬಿಎಂ ಜಿಲ್ಲಾ ಸಯೋಜಕಿ ಬಸಮ್ಮ, ನರೇಗಾ ಡಿಐಇಸಿ ಶ್ರೀನಿವಾಸ್ ಚಿತ್ರಗಾರ, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿ ಶಬ್ಬೀರ್, ರಾಘವೇಂದ್ರ, ಸಾಹಸ ಸಂಸ್ಥೆ ಪ್ರತಿನಿಧಿಗಳಾದ ಜೋಗದ್ ಮಂಜುನಾಥ, ಸಂಪತ್ ಇತರರಿದ್ದರು.