ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ಮಾತಾ ಬಚಾವೋ (ಭೂಮಿ ಉಳಿಸಿ) ಜಾಗೃತಿ ಸಭೆಯಲ್ಲಿ ಮಾಹಿತಿ ಕರಪತ್ರ ಪ್ರದರ್ಶಿಸಲಾಯಿತು. ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ, ಕೃಷಿ ಇಲಾಖೆ ಸಿಬ್ಬಂದಿ ದ್ಯಾಮನಗೌಡ ಕರಿಗೌಡ್ರ, ಕಿರಣ, ಕಾಸಿಂಸಾಬ್, ಮಹಾಬಲೇಶ ಚಿಣಗಿ, ರೈತರಾದ ಬಾಳಪ್ಪ ಸಜ್ಜನ, ಚೀಗಪ್ಪ ಹಂಚಿನಾಳ, ಹನಮೇಶ ಕಂಬಳಿ, ಮಂಜುನಾಥ ಗೌಡ್ರು ಇದ್ದರು. 
ಕೊಪ್ಪಳ

ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಗುಣಮಟ್ಟ ಹಾಳು

ಪ್ರಮುಖ ಮುಖ್ಯಾಂಶಗಳು

  • ರೈತ
  • ಸಂಪರ್ಕ
  • ಕೇಂದ್ರ
ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ಮಾತಾ ಬಚಾವೋ (ಭೂಮಿ ಉಳಿಸಿ) ಜಾಗೃತಿ ಸಭೆ ಗುರುವಾರ ನಡೆಯಿತು.
ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಮಾತನಾಡಿ, ಇತ್ತೀಚಿಗೆ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಮಣ್ಣಿನ ಗುಣಮಟ್ಟ ಹಾಳಾಗಲಿದೆ. ಮಣ್ಣಿನ ಜೀವಾಣುಗಳು ಮತ್ತು ಪೋಷಕಾಂಶಗಳು ಹಾನಿಗೊಳಗಾಗುವುದರಿಂದ ಭವಿಷ್ಯದಲ್ಲಿ ಬೆಳೆ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ.
ರಾಸಾಯನಿಕ ಗೊಬ್ಬರಗಳ ಬಳಕೆ ಕೇವಲ ಭೂಮಿಯಷ್ಟೇ ಅಲ್ಲ, ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆಹಾರ ಪದಾರ್ಥಗಳ ಮೂಲಕ ಮಾನವನ ದೇಹಕ್ಕೆ ವಿಷಪದಾರ್ಥಗಳು ಪ್ರವೇಶಿಸಿ ವಿವಿಧ ರೋಗಗಳಿಗೆ ಕಾರಣವಾಗುತ್ತದೆ ಎಂದರು.
ಸಭೆಯಲ್ಲಿ ರೈತರು ತಮ್ಮ ಅನುಭವ ಹಂಚಿಕೊಂಡು, ಇತ್ತೀಚಿನ ಕೃಷಿ ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ಚರ್ಚಿಸಿದರು.