ಕನಕಗಿರಿಯಲ್ಲಿ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಡಿ.ಅಗಸರ ಉದ್ಘಾಟಿಸಿದರು. ಕಲಾ ತಂಡದ ಸದಸ್ಯ ವೀರಯ್ಯ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಡಿ.ಎಚ್. ಮಂಜುಳಾ, ಸೇವಾ ಪ್ರತಿನಿಧಿಗಳಾದ ಅಶ್ವಿನಿ, ಮಂಜುಳಾ ಇದ್ದರು.
- ತಾಲೂಕು ಯೋಜನಾಧಿಕಾರಿ ನಿಂಗಪ್ಪ ಡಿ. ಅಗಸರ ಹೇಳಿಕೆ
- ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
ಕನಕಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದಾಗಿನಿಂದ ನಾನಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರಿಗೆ ಹತ್ತಿರವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ನಿಂಗಪ್ಪ ಡಿ. ಅಗಸರ ಹೇಳಿದರು.
ಪಟ್ಟಣದ 14ನೇ ವಾರ್ಡಿನ ಅಂಬಿಗರ ಓಣಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ, ಪರಿಸರ ಸ್ವಚ್ಛತೆ ಹಾಗೂ ಬಾಲ್ಯ ವಿವಾಹ ತಡೆ ಕುರಿತು ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆಯೂ ಮಹಿಳೆಯರ ಅಭ್ಯೂದಯಕ್ಕಾಗಿ ಆರೋಗ್ಯ, ಶಿಕ್ಷಣ ಸೌಲಭ್ಯ ಜತೆಗೆ ನಿರ್ಗತಿಕರಿಗೆ ಮಾಸಾಶನ ನೀಡುತ್ತಿದೆ. ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ದೇವಸ್ಥಾನಗಳ ಜೀರ್ಣೊದ್ಧಾರಕ್ಕೆ ಸಹಾಯಧನ ನೀಡಲಾಗುತ್ತಿದೆ. ಸುಜ್ಞಾನ ಶಿಷ್ಯವೇತನದಡಿ ಮಕ್ಕಳಿಗೆ ಸಹಾಯಧನ, ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ರಚನೆ, ಪರಿಸರ ಸ್ವಚ್ಛತೆಯ ಮಹತ್ವ, ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಪರಿಸರ ಸ್ವಚ್ಛತೆ, ಒಣ-ಹಸಿ ಕಸವನ್ನು ಬೇರ್ಪಡಿಸಿ ಕಸದ ವಾಹನಕ್ಕೆ ಹಾಕುವುದು, ಶೌಚಗೃಹ ಬಳಸಿ ನೈರ್ಮಲ್ಯ ಕಾಪಾಡುವುದು ಹಾಗೂ ಬಾಲ್ಯ ವಿವಾಹ ತಡೆಯುವ ಕುರಿತು ಕುಷ್ಟಗಿಯ ಜನಜಾಗೃತಿ ಕಲಾ ತಂಡದಿಂದ ಬೀದಿ ನಾಟಕ ನಡೆಯಿತು. ಕಲಾ ತಂಡದ ಸದಸ್ಯ ವೀರಯ್ಯ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಡಿ.ಎಚ್.ಮಂಜುಳಾ, ಸೇವಾ ಪ್ರತಿನಿಧಿಗಳಾದ ಅಶ್ವಿನಿ, ಮಂಜುಳಾ, ಸಂಘದ ಸದಸ್ಯರಾದ ಗಾಯತ್ರಿ, ಮಂಜುಳಾ ಸಂಗೀತಾ, ಲಕ್ಷ್ಮೀ, ನಾಗರತ್ನಾ ಇತರರಿದ್ದರು.