ಕನಕಗಿರಿ ಶಂಕರದಯ್ಯನ ಮಠದ ಶಿಲಾಕಂಬಗಳ ಸ್ಮಾರಕಕ್ಕೆ ಕಮಲಾಪುರದ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ ಮತ್ತು ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಐ ಎಚ್.ಡಿ. ಫೈಜುಲ್ಲಾ, ಸ್ಥಳೀಯರಾದ ಪ್ರಲ್ಹಾದರೆಡ್ಡಿ ಇತರರು ಇದ್ದರು. 
ಕೊಪ್ಪಳ

ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಸ್ಥಳ ಭೇಟಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ದಾಖಲೆ
  • ಪರಿಶೀಲಿಸಿ
  • ಅಂತಿಮ ತೀರ್ಮಾನ
* ಸ್ಮಾರಕ ಅಭಿವೃದ್ಧಿಗೆ ಪತ್ರ ಬರೆಯುವ ಭರವಸೆ
ಕನಕಗಿರಿ: ಇಲ್ಲಿನ ಪರಿವೀಕ್ಷಣಾ ಮಂದಿರದಿಂದ ತಾವರಗೆರೆಗೆ ಸಾಗುವ ರಸ್ತೆ ಬಲಭಾಗದಲ್ಲಿನ ಶಂಕರದಯ್ಯನ ಮಠದ ಶಿಲಾಕಂಬದ ಸ್ಮಾರಕ ಹಾಗೂ ಸಾಂಭಾಜಿ ಸಮಾಧಿ ಎನ್ನಲಾದ ಸ್ಥಳಕ್ಕೆ ಕಮಲಾಪುರದ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ ಹಾಗೂ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೊದಲಿಗೆ ಸಾಂಭಾಜಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಶಂಕರದಯ್ಯನ ಮಠದ ಸ್ಮಾರಕಕ್ಕೆ ತೆರಳಿ ಅಲ್ಲಿನ ಶಾಸನ ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಂಭಾಜಿ ಸಮಾಧಿ ಎನ್ನಲಾದ ಸ್ಥಳದ ನಿಖರ ಮಾಹಿತಿ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಸೀಲ್ದಾರ್ ಕಾರ್ಯಾಲಯ ಕೇಳಿದ್ದರಿಂದ ಪರಿಶೀಲನೆ ನಡೆಸಲಾಗಿದೆ. ಅದು ಯಾರ ಸಮಾಧಿಯೆಂದು ಈಗಲೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಪುರಾತತ್ವ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯಾವುದೇ ವಿವಾದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇನ್ನು ಶಂಕರದಯ್ಯನ ಮಠದ ಕುರಿತು ಶಾಸನ ವೀಕ್ಷಿಸಿದ್ದು, ಸ್ಮಾರಕದ ಅಭಿವೃದ್ಧಿಗೆ ಪತ್ರ ಬರೆಯಲಾಗುವುದು. ಸುತ್ತಲೂ ಇನ್ನಷ್ಟು ಕುರುಹುಗಳಿದ್ದು, ಒಂದು ವಾರದಲ್ಲಿ ಸ್ವಚ್ಛಗೊಳಿಸಿಕೊಡುವಂತೆ ತಹಸೀಲ್ದಾರ್ ಅವರಿಗೆ ಕೋರಿದ್ದೇವೆ ಎಂದು ತಿಳಿಸಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪುರಾತತ್ವ ಇಲಾಖೆಯ ಎಇಇ ಸತೀಶ್, ಪುರಾತತ್ವ ಸಹಾಯಕರು ಮಂಜು ನಾಯ್ಕ, ಪಿಐ ಎಂ.ಡಿ. ಫೈಜುಲ್ಲಾ ಇತರರು ಇದ್ದರು.