ತಾಲೂಕಿನ ಹಾಲವರ್ತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮನೆಗಳಿಗೆ ಭೇಟಿ ನೀಡಿ ಎಸ್​ಐಆರ್​ ಕುರಿತು ಜಾಗೃತಿ ಮೂಡಿಸಲಾಯಿತು. ತಾಪಂ ಇಒ ಹಾಗೂ ತಾಲೂಕು ಸ್ವೀಪ್​ ಸಮಿತಿ ಅಧ್ಯಕ್ಷ ದುಂಡಪ್ಪ ತುರಾದಿ, ತಾಪಂ ಕಾರ್ಯದರ್ಶಿ ಬಸಯ್ಯ ಕೆಂಬೋಡಿಮಠ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಇದ್ದರು. 
ಕೊಪ್ಪಳ

ಲಿಂಗತ್ವ ಅಲ್ಪಸಂಖ್ಯಾತರಿಗೆ ಎಸ್​ಐಆರ್​ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • ಗಣತಿ ನಮೂನೆ ವಿತರಣೆ
ಕೊಪ್ಪಳ : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಅಂಗವಾಗಿ ತಾಪಂ ಇಒ ಹಾಗೂ ತಾಲೂಕು ಸ್ವೀಪ್​ ಸಮಿತಿ ಅಧ್ಯಕ್ಷ ದುಂಡಪ್ಪ ತುರಾದಿ ಬುಧವಾರ ಹಾಲವರ್ತಿ ಗ್ರಾಮದ ಲಿಂಗತ್ವ ಅಲ್ಪಸಂಖ್ಯಾತರ ಮನೆಗಳಿಗೆ ಭೇಟಿ ನೀಡಿ ಎಸ್​ಐಆರ್​ ಕುರಿತು ಜಾಗೃತಿ ಮೂಡಿಸಿದರು.
ಭಾಗ ಸಂಖ್ಯೆ 168 ಮತ್ತು 169ರಲ್ಲಿ ವಾಸಿಸುವ ಲಿಂಗತ್ವ ಅಲ್ಪಸಂಖ್ಯಾತರಾದ ಉಮಾ ಹೊಸಮನಿ, ಅನು ಹಾಗೂ ಪಾರು ತಳವಾರ ಮನೆಗಳಿಗೆ ಭೇಟಿ ನೀಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮರಣ ಹೊಂದಿರುವವರು, ಸ್ಥಳಾಂತರಗೊಂಡವರು ಹಾಗೂ ನಕಲು ಹೆಸರುಗಳನ್ನು ಪರಿಶೀಲಿಸಿ ಸರಿಪಡಿಸುವಂತೆ ತಿಳಿಸಿದರು.
ಉಮಾ ಹೊಸಮನಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಎಲ್ಲರಿಗೂ ಮಾಹಿತಿ ನೀಡಿ, ಬೂತ್​ ಮಟ್ಟದ ಅಧಿಕಾರಿಗಳು ನೀಡಿರುವ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು. ಲಿಂಗತ್ವ ಅಲ್ಪಸಂಖ್ಯಾತರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೂತ್​ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿದರು.
ತಾಪಂ ಕಾರ್ಯದರ್ಶಿ ಬಸಯ್ಯ ಕೆಂಬೋಡಿಮಠ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಬೂತ್​ ಮಟ್ಟದ ಅಧಿಕಾರಿಗಳಾದ ಹನಮಪ್ಪ ಯರಾಶಿ, ಹಂಚ್ಯಾಳಪ್ಪ ತಳವಾರ, ಗ್ರಾಪಂ ಡಿಇಒ ಹಸನ್​ ಇದ್ದರು.