ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮೋರ್ಚಾದಿಂದ ಜನಸಂಘ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಪದಾಧಿಕಾರಿಗಳಾದ ಲಲಿತಾ ನಾಗರಾಜ, ದೀಪಕ್ ಬಾಂಠಿಯಾ, ಪ್ರಸಾದ ಹಲ್ಟಿ ಇತರರಿದ್ದರು.
ಗಂಗಾವತಿ: ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮೋರ್ಚಾದಿಂದ ಜನಸಂಘ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು ಮಾತನಾಡಿ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕರನ್ನು ಸ್ಮರಿಸಬೇಕಿದ್ದು, ದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಮಹನೀಯರ ಪಕ್ಷ ಸಂಘಟನೆಯ ಆದರ್ಶಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಬೇಕಿದೆ ಎಂದರು.
ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಲಲಿತಾ ನಾಗರಾಜ, ದೀಪಕ್ ಬಾಂಠಿಯಾ, ಪ್ರಸಾದ ಹಲ್ಟಿ, ಸಂಗಮೇಶ ಅಯೋಧ್ಯಾ, ಬಸವರಾಜ ಉಣ್ಣೆಕುರಿ, ಭಾರತಿ ಆಗಲೂರು, ಮೌಲಸಾಬ್, ವೀರೇಶ ಬಲ್ಕುಂದಿ, ಕಾಶೀನಾಥ ಚಿತ್ರಗಾರ, ಪಂಪಣ್ಣನಾಯಕ, ವಿಜಯ ಗದ್ದಿ, ಟಿ.ಆರ್. ರಾಯಭಾಗಿ, ಮಂಜುನಾಥ ಕಟ್ಟಿಮನಿ, ಸೌಭಾಗ್ಯ, ಹುಲಿಗೆಮ್ಮ ಹೊಸಳ್ಳಿ ಇತರರಿದ್ದರು.