ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶಾಸಕ ರಾವೇಂದ್ರ ಹಿಟ್ನಾಳ ಅವರು ಉದ್ಘಟಿಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮರಾಠ ಸಮುದಾಯದ ರಾಜ್ಯಾಧ್ಯಕ್ಷ ಮರಿಯಾಜಿ ರಾವ್ ಜಿ.ಎಚ್., ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾಧ್ಯಕ್ಷ ಮಾರುತಿ ನಿಕ್ಕಂ, ಕಾರ್ಯದರ್ಶಿ ಗವಿಸಿದ್ದಪ್ಪ ನಿಂಬಾಳ್ಕರ, ಖಜಾಂಚಿ ಉಮೇಶ ಬಾಬು ಸುರ್ವೆ, ವಕೀಲ ಠಾಕೂರ್ ಇತರರಿದ್ದರು.
- ಶಾಸಕ ರಾಘವೇಂದ್ರ ಹಿಟ್ನಾಳ
- ಛತ್ರಪತಿ ಶಿವಾಜಿ ಜಯಂತಿ
ಕೊಪ್ಪಳ : ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಿಂದಲೇ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡವರು. ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಅವರ ದೂರದೃಷ್ಟಿ ಅಪ್ರತಿಮವಾಗಿತ್ತು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಬಣ್ಣಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದ ಶಾಸಕರು, ಮರಾಠ ಸಮುದಾಯದ ಭವನಕ್ಕೆ ಈಗಾಗಲೇ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಭವನ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿದ್ದು, ಹೆಚ್ಚುವರಿಯಾಗಿ ಮತ್ತೊಂದು 50 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಶಿವಾಜಿಯವರ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿ ಜಿಜಾಬಾಯಿಯವರ ಪಾತ್ರ ದೊಡ್ಡದು. ಇಂದಿನ ಯುವಕರು ಶಿವಾಜಿಯವರ ವೀರತ್ವ ಮತ್ತು ಶೌರ್ಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರು ಜಿಜಾಬಾಯಿ ಸಂಘಗಳನ್ನು ಕಟ್ಟಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಉಪ ತಹಸೀಲ್ದಾರರು, ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯಂ.ಹೆಚ್. ಪ್ರಕಾಶ್ ರಾವ್, ಸರೋಜ ಭಾಕಳೆ, ಜಿಲ್ಲಾಧ್ಯಕ್ಷ ಮಾರುತಿ ನಿಕ್ಕಂ, ಕಾರ್ಯದರ್ಶಿ ಗವಿಸಿದ್ದಪ್ಪ ನಿಂಬಾಳ್ಕರ, ಖಜಾಂಜಿ ಉಮೇಶ ಬಾಬು ಸುರ್ವೆ, ವಕೀಲ ಠಾಕೂರ್ ಇತರರಿದ್ದರು.
ನಮ್ಮ ಭಾಷೆ ಮರಾಠಿ ಇರಬಹುದು, ಆದರೆ ನಮ್ಮ ಉಸಿರು ಕನ್ನಡ. ನಾವೆಲ್ಲರೂ ಕನ್ನಡ ಮರಾಠಿಗಳು. ಹಿಂದೆ ಕೇವಲ 50 ಕೋಟಿ ರೂ. ಇದ್ದ ಅನುದಾನವನ್ನು ಪ್ರಸ್ತುತ ಸರ್ಕಾರ 187 ಕೋಟಿ ರೂ. ಗೆ ಏರಿಸಿದೆ. ಮರಾಠ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಮತ್ತು ಜಿಜಾವು ಜಲ ನಿಗಮದ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಬಳಸಿಕೊಂಡು ಆರ್ಥಿಕವಾಗಿ ಬಲಾಡ್ಯರಾಗಬೇಕು.