ಕೊಪ್ಪಳ ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಯಭಟ ಕ್ವೆಸ್ಟ್-3.0 ಅಂತರ ಶಾಲಾ ಗಣಿತ ಸ್ಪರ್ಧೆಯಲ್ಲಿ ಆರಾಧ್ಯ ಬಿ.ಎಂ ಪ್ರಥಮ ಸ್ಥಾನ ಪಡೆದರು. ಗುರುರಾಯ ಕೋಚಿಂಗ್ ಸೆಂಟರ್ನ ಸಂಸ್ಥಾಪಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ, ಶಾರದಾ ಸಂಸ್ಥೆ ನಿರ್ದೇಶಕ ಕಿರಣ್ ಪಾಟೀಲ್ ಇದ್ದರು.
- ಆರ್ಯಭಟ ಕ್ವೆಸ್ಟ್-3.0 ಅಂತರ ಶಾಲಾ ಗಣಿತ ಸ್ಪರ್ಧೆ
ಕೊಪ್ಪಳ : ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಭಾನುವಾರ ಶ್ರೀ ಗುರುರಾಯ ಆರ್ಯಭಟ ಕ್ವೆಸ್ಟ್-3.0 ಅಂತರ ಶಾಲಾ ಗಣಿತ ಸ್ಪರ್ಧೆ ಯಶಸ್ವಿಯಾಗಿ ಜರುಗಿತು.
ವಿವಿಧ ಶಾಲೆಗಳಲ್ಲಿ ನಡೆದ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂತಿಮ ಹಂತದ ಲಿಖಿತ ಪರೀಕ್ಷೆ ಹಾಗೂ ಬಜಾರ್ ರೌಂಡ್ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ಜ್ಞಾನ ಪರೀಕ್ಷಿಸುವ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗಿಯಾದರು.
ಶಾರದಾ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅದ್ವಿತ್ ಎ. ಶೆಟ್ಟಿ ಪ್ರಥಮ ಸ್ಥಾನ, 7ನೇ ತರಗತಿಯ ಆರಾಧ್ಯ ಬಿ.ಎಂ ಪ್ರಥಮ ಸ್ಥಾನ ಹಾಗೂ ಸಾಕೇತ್ ಕುಮಾರ್ ದ್ವೀತಿಯ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದರು.
ಗುರುರಾಯ ಕೋಚಿಂಗ್ ಸೆಂಟರ್ನ ಸಂಸ್ಥಾಪಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ, ಶಾರದಾ ಸಂಸ್ಥೆ ನಿರ್ದೇಶಕ ಕಿರಣ್ ಪಾಟೀಲ್, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.