ಹಾಸ್ಟೆಲ್ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಪಂ ಕಚೇರಿ ವ್ಯವಸ್ಥಾಪಕ ನಜೀರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು. ಹಾಸ್ಟೆಲ್ ಉಪ ಸಮಿತಿ ರಾಜ್ಯ ಸಹ ಸಂಚಾಲಕ ಎಂ.ಡಿ.ಶರ್ೀ, ಪದಾಧಿಕಾರಿಗಳಾದ ಬಸಯ್ಯ ಹಿರೇಮಠ, ಯಂಕಣ್ಣ ಇತರರಿದ್ದರು.
ಗಂಗಾವತಿ:ಬಿಸಿಎಂ ಸೇರಿ ಎಲ್ಲ ಇಲಾಖೆ ಹಾಸ್ಟೆಲ್ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವ್ಯವಸ್ಥಾಪಕ ನಜೀರ್‌ಗೆ ಮನವಿ ಸಲ್ಲಿಸಿದರು.
ಹಾಸ್ಟೆಲ್ ಉಪ ಸಮಿತಿ ರಾಜ್ಯ ಸಹ ಸಂಚಾಲಕ ಎಂ.ಡಿ.ಶರ್ೀ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳಾದರೂ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ. ಈಗಾಗಲೇ ಪಾಠಗಳು ಆರಂಭವಾಗಿದ್ದು, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ತರಗತಿ ತಪ್ಪಿಸುವಂತಿಲ್ಲ. ಹಾಸ್ಟೆಲ್ ಪಟ್ಟಿ ಪ್ರಕಟವಾಗದಿದ್ದರಿಂದ ನಿತ್ಯವೂ ವಾಹನಗಳ ಮೂಲಕ ಬರುವಂತಾಗಿದೆ.
ಹಾಸ್ಟೆಲ್ ಪಟ್ಟಿ ವಿಳಂಬದಿಂದ ಕೆಲವರು ಶಿಕ್ಷಣದಿಂದ ದೂರ ಉಳಿಯುತ್ತಿದ್ದು, ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಬಿಸಿಎಂ, ಪಜಾ, ಪಪಂ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳಿಗೆ ಜೂ.19ರೊಳಗೆ ಆಯ್ಕೆಪಟ್ಟಿ ಬಿಡುಗಡೆಗೊಳಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರು ಆದೇಶಿಸಿದ್ದರೂ ಇದುವರೆಗೆ ಪ್ರಕಟವಾಗಿಲ್ಲ.
ಗಮನಹರಿಸಬೇಕಿದ್ದ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದು, ಶೀಘ್ರವೇ ಪ್ರಕಟಿಸದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಬಸಯ್ಯ ಹಿರೇಮಠ, ಯಂಕಣ್ಣ, ಕೌಶಿಕ್ ಇತರರಿದ್ದರು.