ಹಾಸ್ಟೆಲ್‌ಗಳನ್ನು ಆರಂಭಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಬಾಬೂ ಜಗಜೀನವರಾಮ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ರಾಜ್ಯ ಸಹ ಸಂಚಾಲಕ ಶರ್ೀ, ಜಿಲ್ಲಾಧ್ಯಕ್ಷ ಶಿವಕುಮಾರ, ಯು.ನಾಗರಾಜ್, ಪದಾಧಿಕಾರಿಗಳಾದ ಮಾರುತಿ, ರೇಷ್ಮಾ, ಚೈತ್ರಾ, ಸುಚಿತ್ರಾ ಇತರರಿದ್ದರು.
ಗಂಗಾವತಿ: ಶಾಲೆ, ಕಾಲೇಜು ಶುರುವಾಗಿದ್ದು ಹಾಸ್ಟೆಲ್‌ಗಳನ್ನು ಆರಂಭಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಾಬೂ ಜಗಜೀನವರಾಮ್ ವೃತ್ತದಲ್ಲಿ ಮಂಗಳವಾರ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ವಸಂತಕುಮಾರಿಗೆ ಮನವಿ ಸಲ್ಲಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಮಾತನಾಡಿ, ಈಗಾಗಲೇ ಶಾಲಾ, ಕಾಲೇಜು ಆರಂಭವಾಗಿದ್ದು, ಆದರೆ ಹಾಸ್ಟೆಲ್ ಆಯ್ಕೆ ಪಟ್ಟಿ ಇನ್ನೂ ಪ್ರಕಟಿಸಿಲ್ಲ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮೆರಿಟ್ ಆಧಾರದಡಿ ಆಯ್ಕೆ ಮಾಡದೇ, ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಬಯೋಮೆಟ್ರಿಕ್ ಹಾಜರಾತಿ ಕೈಬಿಡಬೇಕು. ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಮೆನು ಪ್ರಕಾರ ಆಹಾರ ನೀಡಬೇಕಿದ್ದು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ವ್ಯವಸ್ಥೆ ಜತೆಗೆ ಅಗತ್ಯ ಪುಸ್ತಕಗಳನ್ನು ಒದಗಿಸಬೇಕು. ಆಹಾರ ಭತ್ಯೆ ಮಾಸಿಕ 4500ರೂ.ಗೆ ಹೆಚ್ಚಿಸಬೇಕಿದ್ದು, ಕುಡಿವ ನೀರು, ಫ್ರೀ ವೈೈ ಸೇರಿ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.
ರಾಜ್ಯ ಸಹ ಸಂಚಾಲಕ ಶರ್ೀ, ಜಿಲ್ಲಾಧ್ಯಕ್ಷ ಶಿವಕುಮಾರ, ಯು.ನಾಗರಾಜ್, ಪದಾಧಿಕಾರಿಗಳಾದ ಮಾರುತಿ, ಮಂಜುನಾಥ, ರೇಷ್ಮಾ, ಚೈತ್ರಾ, ಸುಚಿತ್ರಾ, ಖುಷಿ ಇತರರಿದ್ದರು.