ಜಿಲ್ಲೆಯ ಗಂಗಾವತಿ ನಗರದ ಕಲಾ ರಂಗಮಂದಿರ ನೆಲಸಮ ಖಂಡಿಸಿ ಎಸ್ಎ್ಐ ಡಿಸಿ ಕಚೇರಿ ತಹಸೀಲ್ದಾರ್ ರಾಜು ಫಿರಂಗಿಗೆ ಮನವಿ ಸಲ್ಲಿಸಿದರು. ಎಸ್ಎಫ್ ಐ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಯು., ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಹುಸೇನಪ್ಪ ಕೆ., ರಮೇಶ್ ಡಿ. ಇದ್ದರು.
ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದ ಸರ್ಕಾರಿ ಪದವಿ ಪೂರ್ವ (ಜ್ಯೂನಿಯರ್) ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರ ನೆಲಸಮಗೊಳಿಸಿ, ಕಾಲೇಜು ಆವರಣವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಕ್ರಮವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಘಟಕವು ಸೋಮವಾರ ಡಿಸಿ ಕಚೇರಿ ತಹಸೀಲ್ದಾರ್ ರಾಜು ಫಿರಂಗಿಗೆ ಮನವಿ ಸಲ್ಲಿಸಿತು.
ಎಸ್ಎ್ಐ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಯು. ಮಾತನಾಡಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಸುಮಾರು 75 ವರ್ಷಗಳ ಇತಿಹಾಸವಿದ್ದು, ಇದು ತಾಲೂಕಿನ ಶಾಲಾ-&ಕಾಲೇಜುಗಳ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಕಳೆದ ಹಲವು ವರ್ಷಗಳಿಂದ ವಿವಿಧ ಕಟ್ಟಡಗಳ ನಿಮಾರ್ಣದಿಂದ ಮೈದಾನ ಅತಿಕ್ರಮಣಕ್ಕೆ ಒಳಗಾಗುತ್ತಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಮೈದಾನದಲ್ಲಿದ್ದ ಕಲಾ ರಂಗಮಂದಿರವು ಅನೇಕ ಕಲಾವಿದರನ್ನು ಬೆಳೆಸಿದ ಸಾಂಸತಿಕ ವೇದಿಕೆಯಾಗಿದ್ದು, ಅದನ್ನು ಫುಡ್ ಕೋರ್ಟ್ ನಿಮಾರ್ಣದ ಹೆಸರಿನಲ್ಲಿ ಬುಲ್ಡೋಜರ್ ಬಳಸಿ ನೆಲಸಮಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಇತರೆ ಕೆಲಸಗಳಿಗೆ ಪರ್ಯಾಯ ಜಾಗಗಳಿದ್ದರೂ ಕಾಲೇಜು ಆವರಣವನ್ನು ಬಳಸುತ್ತಿರುವುದು ಸರಿಯಲ್ಲ ಎಂದರು.
ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಅದೇ ಸ್ಥಳದಲ್ಲಿ ಕಲಾ ರಂಗಮಂದಿರವನ್ನು ಮರು ನಿರ್ಮಿಸಬೇಕು. ಇಲ್ಲವಾದರೆ ಎಸ್ಎಫ್ ಐನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಸವರಾಜ ಮರಕುಂಬಿ, ಹುಸೇನಪ್ಪ ಕೆ., ರಮೇಶ್ ಡಿ. ಇತರರಿದ್ದರು.