ಕನಕಗಿರಿ ತಹಸಿಲ್ ಕಚೇರಿಯಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಖಜಾಂಚಿ ಗುರುಲಿಂಗಯ್ಯ ಪೂಜಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಶಿವರಾಜ ಭೋವಿ, ರಾಜು ಚವ್ಹಾಣ, ಸಿಬ್ಬಂದಿ ಅಮರೇಶ್, ಶಿವುಕುಮಾರ ಮ್ಯಾಗೇರಿ, ಗಣೇಶ ಇತರರಿದ್ದರು.
- ಗುರುಲಿಂಗಯ್ಯ ಪೂಜಾರ ಹೇಳಿಕೆ
- ಕನಕಗಿರಿ ತಹಸಿಲ್ ಕಚೇರಿ ಸಂತ ಸೇವಾಲಾಲರ ಜಯಂತಿ
ಕನಕಗಿರಿ: ಅಪಾರ ದೈವೀ ಭಕ್ತರಾಗಿದ್ದ ಸೇವಾಲಾಲರು ಮೂಢನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಾಗಿದ್ದರು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಖಜಾಂಚಿ ಗುರುಲಿಂಗಯ್ಯ ಪೂಜಾರ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರಲ್ಲಿ ಲಂಬಾಣಿ ಸಮುದಾಯದ ಕುಲಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು.
ಪಶು ಸಾಕಣೆ ಮಾಡುತ್ತಿದ್ದ ಅವರು, ಸಂಗೀತಗಾರ, ಧೈರ್ಯಶಾಲಿ ಯೋಧರಾಗಿದ್ದರು. ತಮ್ಮ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದರು. ಅಲ್ಲದೆ, ಜಗದಂಬೆಯ ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟವನ್ನು ಮಾಡಿದರು ಎಂದು ತಿಳಿಸಿದರು.