ಕುಕನೂರಿನ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಎದುರು ಪಪಂನಿಂದ ಘನತ್ಯಾಜ್ಯಗಳ ನಮೂನೆ ಮತ್ತು ವಿಂಗಡಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಅನ್ನದಾನೀಶ್ವರ ಮಠದ ಡಾ.ಮಹಾದೇವ ಸ್ವಾಮೀಜಿ, ಪ್ರಮುಖರಾದ ಈರಮ್ಮ ಗಾಟಿ, ಚಂದ್ರಕಲಾ ಹಾಲಕೆರೆ, ಶಿಲ್ಪಾ ಭಜಂತ್ರಿ, ಹುಸೇನ್ ಬಿ, ನಾಗಮ್ಮ ಮಳಿಗಿ ಇದ್ದರು. 
ಕೊಪ್ಪಳ

ತ್ಯಾಜ್ಯವನ್ನು ಮನೆಯಲ್ಲೇ ವಿಂಗಡಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಡಾ.ಮಹಾದೇವ ಸ್ವಾಮೀಜಿ ಸಲಹೆ
  • ಘನತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಕಾರ್ಯಕ್ರಮ
ಕುಕನೂರು: ಸ್ವಚ್ಛತೆಯೇ ದೇವರ ಸೇವೆ. ನಮ್ಮ ಮನೆಯ ಕಸವನ್ನು ನಾವೇ ವಿಂಗಡಿಸಿ ಕೊಡುವುದು ನಾಗರಿಕನ ಆದ್ಯ ಕರ್ತವ್ಯ ಎಂದು ಅನ್ನದಾನೀಶ್ವರ ಮಠದ ಡಾ.ಮಹಾದೇವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಎದುರು ಪಪಂನಿಂದ ಇತ್ತೀಚೆಗೆ ನಡೆದ ಘನತ್ಯಾಜ್ಯ ನಮೂನೆ ಮತ್ತು ವಿಂಗಡಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿ ಕಸ, ಒಣ ಕಸ, ಸ್ಯಾನಿಟರಿ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಮನೆಯಲ್ಲೇ 4 ವಿಧವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಇದರಿಂದ ಪರಿಸರ ಸಂರಕ್ಷಣೆ ಜತೆಗೆ ರೋಗಗಳು ಕಡಿಮೆಯಾಗುತ್ತವೆ ಎಂದರು.
ಪಪಂ ಸಿಬ್ಬಂದಿ ಬಸವರಾಜ ಆರ್‌ಬೆರಳಿನ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಹಾಗೂ ವಿಂಗಡಿಸದೆ ತ್ಯಾಜ್ಯ ನೀಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಈರಮ್ಮ ಗಾಟಿ, ಚಂದ್ರಕಲಾ ಹಾಲಕೆರೆ, ಶಿಲ್ಪಾ ಭಜಂತ್ರಿ, ಹುಸೇನ್ ಬಿ, ನಾಗಮ್ಮ ಮಳಿಗಿ, ಸಂಗಮೇಶ ಕಲ್ಮಠ, ಸಂಗಪ್ಪ ಗುತ್ತಿ, ಶಿವು ಯತ್ನಟ್ಟಿ ಇತರರಿದ್ದರು.