ಅಳವಂಡಿ ಸಮೀಪದ ನಿಲೋಗಿಪುರದ ಸಹಿಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು. ಮುಖ್ಯಶಿಕ್ಷಕ ಗವಿಸಿದ್ದಪ್ಪ ಡಂಬ್ರಳ್ಳಿ, ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ, ಪ್ರಮುಖರಾದ ಚಂರಂತಯ್ಯ, ಶರಣಪ್ಪ, ಶರಣಪ್ಪ, ಹನುಮಪ್ಪ, ದೇವಪ್ಪ ಇತರರಿದ್ದರು.
- ಮುಖ್ಯಶಿಕ್ಷಕ ಗವಿಸಿದ್ದಪ್ಪ ಡಂಬ್ರಳ್ಳಿ ಸಲಹೆ
- ಶಾಲಾ ಪ್ರಾರಂಭೋತ್ಸವ
ಅಳವಂಡಿ: ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಿ ಭವಿಷ್ಯವನ್ನು ಉಜ್ವಲಗೊಳಿಸಲು ಪಾಲಕರು ಕೈ ಜೋಡಿಸಬೇಕು ಎಂದು ಮುಖ್ಯಶಿಕ್ಷಕ ಗವಿಸಿದ್ದಪ್ಪ ಡಂಬ್ರಳ್ಳಿ ಹೇಳಿದರು.
ಸಮೀಪದ ನಿಲೋಗಿಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಆರಂಭದಿಂದಲೇ ಶಾಲೆಗೆ ಕಳುಹಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಸರ್ಕಾರ ಮಕ್ಕಳಿಗಾಗಿ ಜಾರಿಗೊಳಿಸಿದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ನಿಂಗಾಪುರ, ಪ್ರಮುಖರಾದ ಚಂರಂತಯ್ಯ ಹಿರೇಮಠ, ಶರಣಪ್ಪ ಹೂಗಾರ, ಶರಣಪ್ಪ ಹಂದ್ರಾಳ, ಹನುಮಪ್ಪ ಬಾವಿ, ದೇವಪ್ಪ ಬಿಸನಳ್ಳಿ, ಮುಖ್ಯಶಿಕ್ಷಕ ಗವಿಸಿದ್ಧಪ್ಪ ಡಂಬ್ರಳ್ಳಿ, ಶಿಕ್ಷಕರಾದ ವೆಂಕರಡ್ಡಿ ನಾಗರಳ್ಳಿ, ಬಸಪ್ಪ ಜೀರ, ಸಂಗಪ್ಪ ರಾಟಿ, ಮುತ್ತು ಎಚ್.ಬನ್ನಿಕೊಪ್ಪ, ನಾಗಪ್ಪ ಶೀರನಹಳ್ಳಿ, ಮಂಜುನಾಥ ತಗಡಿನಮನಿ, ಚಂದ್ರಶೇಖರಯ್ಯ ಸಿಂದೋಗಿ ಇದ್ದರು.