ಗಂಗಾವತಿ ಬಿಇಒ ಕಚೇರಿ ಮುಂದೆ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ,ಬೇಡಿಕೆ ಮನವಿಯನ್ನು ವ್ಯವಸ್ಥಾಪಕ ಶಿವಪ್ರಸಾದ ಅವರಿಗೆ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ್, ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಪದಾಧಿಕಾರಿಗಳಾದ ಎಂ.ಶರ್ೀ, ಸಮೃದ್ಧ, ಆರ್.ನಾಗರಾಜ ಇತರರಿದ್ದರು.  
ಕೊಪ್ಪಳ

ಮುಷ್ಕರದಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಎ್ಐ
  • ತಾಲೂಕು ಸಮಿತಿ
  • ಆಗ್ರಹ
ಗಂಗಾವತಿ: ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ಫೆ.12ರಂದು ಸಾರ್ವತ್ರಿಕ ರಜೆ ಘೋಷಿಸಲು ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಶಾಲೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ವ್ಯವಸ್ಥಾಪಕ ಶಿವಪ್ರಸಾದ ಅವರಿಗೆ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ್ ಮಾತನಾಡಿ, ಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ಫೆ.12ರಂದು ದೇಶದಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದು, ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಟ ನಡೆಸಲಿದ್ದಾರೆ. ಮುಷ್ಕರದಲ್ಲಿ ರೈತರು, ಕಾರ್ಮಿಕರು, ಬಿಸಿಯೂಟ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ಶಿಕ್ಷಣ ಕ್ಷೇತ್ರ ಬಲಪಡಿಸಲು ಅನುದಾನ ಪ್ರಮಾಣ ಹೆಚ್ಚಳದ ಬೇಡಿಕೆಯಿದೆ. ಶಾಲೆಗಳಲ್ಲಿನ ಹುದ್ದೆ ಭರ್ತಿ ಸೇರಿ ಮೂಲ ಸೌಕರ್ಯಕ್ಕಾಗಿ ಮುಷ್ಕರ ನಡೆಸಲಾಗುತ್ತಿದ್ದು, ಶಾಲಾ, ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಪದಾಧಿಕಾರಿಗಳಾದ ಎಂ.ಶರ್ೀ, ಸಮೃದ್ಧ, ಆರ್.ನಾಗರಾಜ ಇತರರಿದ್ದರು.
ಗಂಗಾವತಿ ಬಂದ್‌ಗೆ ಕರೆ: ಮುಷ್ಕರ ಭಾಗವಾಗಿ ಫೆ.12ರಂದು ಗಂಗಾವತಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದ್ದು, ವಿವಿಧ ಕಾರ್ಮಿಕ ಸಂಘಟನೆಗಳು ಭಾಗವಹಿಸಲಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹೇಳಿದರು.
ನಗರದ ಬಸವೇಶ್ವರ ಪ್ರತಿಮೆ ಬಳಿ ಸಿಪಿಐ(ಎಂ)ಮತ್ತು ಸಿಐಟಿಯುನಿಂದ ಹಮ್ಮಿಕೊಂಡ ಮುಷ್ಕರದ ಕರಪತ್ರ ಬಿಡುಗಡೆ ಅಭಿಯಾನದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲೇಬರ್ ಕೋಡ್‌ಗಳು ಕಾರ್ಮಿಕರಿಗೆ ಮಾರಕವಾಗಿದ್ದು, ನರೇಗಾ ಯೋಜನೆ ದುರ್ಬಲಗೊಳಿಸುವ ಹುನ್ನಾರ ನಡೆಸಿದೆ. ವಿದ್ಯುತ್, ವಿಮೆ, ಬೀಜ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಲಾಗುತ್ತಿದ್ದು, ಉದ್ಯೋಗ ಭದ್ರತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗುವುದು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಣ್ಣ ಹನುಮಂತ, ಬಸವರಾಜ ಮರಕುಂಬಿ, ಕೆ.ಹುಸೇನಪ್ಪ, ಮಂಜುನಾಥ ಡಗ್ಗಿ, ಶ್ರೀನಿವಾಸ, ಮುತ್ತಣ್ಣ ದಾಸನಾಳ್, ಎ.ಬಸವರಾಜ, ಎ.ರಮೇಶ, ರವಿ ಅಕ್ಕಿರೊಟ್ಟಿ ಇತರರಿದ್ದರು.