ಗಾಲಿ ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.  
ಕೊಪ್ಪಳ

ಹಗರಣಗಳೇ ರಾಜ್ಯ ಸರ್ಕಾರದ ಸಾಧನೆ

ಪ್ರಮುಖ ಮುಖ್ಯಾಂಶಗಳು

  • ಸಾಲದಲ್ಲಿ ಗಿನ್ನೆಸ್​ ರೆಕಾರ್ಡ್​
  • ಶಾಸಕ ಜನಾರ್ದನ ರೆಡ್ಡಿ ಆರೋಪ
ಕೊಪ್ಪಳ : ಈ ಮೂರು ವರ್ಷದಲ್ಲಿ ಸಾಲು ಸಾಲು ಹಗರಣ ಮಾಡಿದ್ದೇ ರಾಜ್ಯ ಸರ್ಕಾರದ ದೊಡ್ಡ ಸಾಧನೆ. ಸಾಲ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ಗಿನ್ನೆಸ್​ ರೆಕಾರ್ಡ್​ ಮಾಡಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ ಅಲ್ಪಸಂಖ್ಯಾತರ ಓಲೈಕೆ ನಡೆದಿದೆ. ಹಿಂದುಗಳನ್ನು ಕಡೆಗಣಿಸಲಾಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲಿ ನಂ.1 ಇದೆ. ಮೂರು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಸಲಾಗಿದೆ. ದಲಿತರ ಹಣ ದುರುಪಯೋಗವಾಗಿದೆ. ಮುಡಾ ಹಗರಣದಲ್ಲಿ ಸ್ವತಃ ಸಿಎಂ ಕುಟುಂಬದವರು ಸಿಲುಕಿದ್ದಾರೆ. ವರ್ಗಾವಣೆ ದಂಧೆ ನಡೆದಿದೆ. ಇಷ್ಟೆಲ್ಲ ಅನಾಚಾರ ಮಾಡಿ ಯಾವ ಮುಖ ಇಟ್ಟುಕೊಂಡು ಸಾಧನಾ ಸಮಾವೇಶ ಮಾಡುತ್ತಾರೆ ? ಇವರಿಗೆ ನಾಚಿಕೆ, ಮರ್ಯಾದೆ ಇಲ್ಲವೆಂದು ಛೇಡಿಸಿದರು.
ಕಾಂಗ್ರೆಸ್​ ಪಕ್ಷಕ್ಕೆ ಕರ್ನಾಟಕ ಎಟಿಎಂ ಕಾರ್ಡ್​ ಆಗಿದೆ. ಯುವಕರು ಉದ್ಯೋಗ ಕೊಡಿ ಎಂದರೆ ಜೈಲಿಗೆ ಹಾಕುತ್ತಿದ್ದಾರೆ. ಚುನಾವಣೆ ಬಂದಾಗ ಗ್ಯಾರಂಟಿ ರೊಕ್ಕ ಜನರ ಕೈ ಸೇರುತ್ತಿವೆ. ದರೋಡೆ ಹೆಚ್ಚಿದೆ. ಗುತ್ತಿಗೆದಾರರು ಸರ್ಕಾರದ ಕಮಿಷನ್​ ದಾಹಕ್ಕ ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಕೆಕೆಆರ್​ಡಿಬಿಗೆ ಐದು ಸಾವಿರ ಕೋಟಿ ಕೊಟ್ಟಿರುವುದಾಗಿ ಹೇಳುತ್ತಾರೆ. ಯೋಜನೆ ವಿವರ ಸಲ್ಲಿಸಿದರೆ ಅನುಮೋದಿಸಲು ಒಂದು ವರ್ಷ ಹಿಡಿಯುತ್ತಿದೆ. ಬಾರ್​ ಲೈಸೆನ್ಸ್​ಗೆ 700 ಕೋಟಿ ರೂ.ಗೆ ಸಚಿವರು ಬೇಡಿಕೆ ಇಟ್ಟರು. ಲೋಕಾಯುಕ್ತ ದುರ್ಬಲಗೊಂಡಿದೆ. ಕನ್ನಡ ಶಾಲೆ ಮುಚ್ಚಿ, ಉರ್ದು ಶಾಲೆ ತೆರೆಯುತ್ತಿರುವುದು ದುರಾಡಳಿತಕ್ಕೆ ಸಾ ಎಂದರು. ಜಿಲ್ಲಾಧ್ಯಕ್ಷ ನವೀನ ಗುಳಗ್ಣವರ, ಡಾ.ಬಸವರಾಜ ಕ್ಯಾವಟರ್​ ಇತರರಿದ್ದರು.

ಎಸಿ ಮಾಲಗಿತ್ತಿ ಹಿಂದೂ ವಿರೋಧಿ

ಅಂಜನಾದ್ರಿಗೆ ನನ್ನ ಸ್ನೇಹಿತ ಮಹೇಶರೆಡ್ಡಿಯವರು 1440 ಗ್ರಾಂ ಬಂಗಾರದ ಆಭರಣ ನೀಡಿದ್ದಾರೆ. ಆದರೆ, ಸರಿಯಾಗಿ ಪರಿಶೀಲಿಸದೇ ಎಸಿ ಕ್ಯಾ.ಮಹೇಶ ಮಾಲಗಿತ್ತಿ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ನಂತರ ಪರಿಶೀಲಿಸಿ ಸರಿಯಾಗಿದೆ ಎಂದು ರಸೀದಿ ನೀಡಿದ್ದಾರೆ. ಮಾಲಗಿತ್ತಿ ಹಿಂದೂ ವಿರೋಧಿ. ಭ್ರಷ್ಟ. ಆತನ ವಿರುದ್ಧ ಸಾಕಷ್ಟು ಆರೋಪಗಳಿವೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಅಂಜನಾದ್ರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಹುಲಿಗಿ ಅಕ್ಕಸಾಲಿಗನಿಂದ ತರಾತುರಿ ಪರೀೆ ಮಾಡಿಸಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ ಅದಕ್ಕೆ ವ್ಯಂಗ್ಯ ಮಾಡಿದ್ದಾರೆ. ದೇವರ ವಿಷಯದಲ್ಲಿ ತಪ್ಪು ಮಾಡಿದವರಿಗೆ ಸರಿಯಾದ ಶಿೆಯಾಗಲಿದೆ. ಇದನ್ನು ಬರೆದಿಟ್ಟುಕೊಳ್ಳಿ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದು ಹೈ ಕಮಾಂಡ್​ಗಿಂತ ಬಲಿಷ್ಠ

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ ಹೈಕಮಾಂಡ್​ಗಿಂತ ಬಲಿಷ್ಠ. ಅವರಾಗಿಯೇ ತಮ್ಮ ರಾಜೀನಾಮೆ ಘೋಷಿಸಬೇಕು. ಪಡೆದುಕೊಳ್ಳಲು ಹೈಕಮಾಂಡ್​ ಶಕ್ತವಿಲ್ಲ. ಸಿದ್ದರಾಮಯ್ಯ ಜಾಣ. ಮೊದಲೇ ಆಗಿದ್ದ ಎರಡೂವರೆ ವರ್ಷ ಒಪ್ಪಂದವನ್ನು ಮೂರು ವರ್ಷಕ್ಕೆ ತಂದಿದ್ದಾರೆ. ಬಾಕಿ ಎರಡು ವರ್ಷ ತಳ್ಳಿದರೂ ಅಚ್ಚರಿ ಇಲ್ಲ. ಡಿಕೆಶಿಯೂ ಹೋಗಲಿ ಬಿಡು ಎಂದು ಸುಮ್ಮನಾಗಬಹುದು. ಈ ವಿಷಯದಲ್ಲಿ ಸಿದ್ದರಾಮಯ್ಯ ತೀರ್ಮಾನವೇ ಅಂತಿಮ ಎಂದು ರೆಡ್ಡಿ ಭವಿಷ್ಯ ನುಡಿದರು.
"

ಶಾಲಾ-ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟಾ ಹಾಕಲಿ. ಹಾಜರಾತಿ ಪಡೆಯುವಾಗ ಜೈ ಶ್ರೀರಾಮ್​ ಎಂದರೆ ತಪ್ಪಿಲ್ಲ. ನಾನು ಅದನ್ನು ಬೆಂಬಲಿಸುವೆ. ನಮ್ಮದು ಹಿಂದೂ ರಾಷ್ಟ್ರ. ಹಿಜಾಬ್​ ಯಾರೂ ಕೇಳಿರಲಿಲ್ಲ. ನ್ಯಾಯಾಲಯದಲ್ಲಿ ಪ್ರಕರಣವಿದೆ. ಸಮಾಜ ಒಡೆಯಬೇಕೆಂದು ಅನುಮತಿಸಿದ್ದಾರೆ. ನಾವು ನಮ್ಮ ದೇಶ ಬಿಟ್ಟು ಅಮೆರಿಕಾದಲ್ಲಿ ಕೇಸರಿ ಶಾಲು ಹಾಕಿಕಳ್ಳಲು ಆಗುವುದಾ ?

— ಗಾಲಿ ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.