ಅಳವಂಡಿ ಸಮೀಪದ ಬೆಟಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಬಸವರಾಜ, ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಇತರರಿದ್ದರು.  
ಕೊಪ್ಪಳ

ಸಾವಿತ್ರಿಬಾಯಿಯಿಂದ ಅಕ್ಷರ ಕ್ರಾಂತಿಗೆ ಮುನ್ನುಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಅಭಿಪ್ರಾಯ
  • ಅಳವಂಡಿ ಸಾವಿತ್ರಿಬಾಯಿ ಫುಲೆ ಜಯಂತಿ
ಅಳವಂಡಿ: ಸಾವಿತ್ರಿಬಾಯಿ ಫುಲೆ ಅವರು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮತ್ತು ದಮನಿತರ ಸಬಲೀಕರಣಕ್ಕಾಗಿ ಹೋರಾಡಿದರು ಎಂದು ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಸಮೀಪದ ಬೆಟಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಅವರ 196 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತಕ್ಕೆ ಸ್ವಾತಂತ್ರೃ ಸಿಗುವ ಮುನ್ನ ಕೆಲ ವರ್ಗದ ಮಹಿಳೆಯರಿಗೆ ಶಿಕ್ಷಣ ಪಡೆಯುವುದು ದುಸ್ತರವಾಗಿತ್ತು. ಆಗ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಮಾತ್ರವಲ್ಲದೆ ಬಡವರ, ತುಳಿತಕ್ಕೊಳಗಾದವರ ಆರೋಗ್ಯ ಸೇವೆ ಮಾಡಿದರು. ಬಾಲಕಿಯರ ಶಿಕ್ಷಣಕ್ಕೆ ಶಾಲೆಗಳು, ವಸತಿ ನಿಲಯಗಳು, ಮೂಲಸೌಕರ್ಯಗಳನ್ನು ಕಲ್ಪಿಸಿದರು. ಅವರ ಪತಿ ಜ್ಯೋತಿಬಾ ಫುಲೆ ನಿಧನರಾದ ಬಳಿಕ ಸತ್ಯಶೋಧಕ ಸಮಾಜದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು ಎಂದರು.
ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ತಾವು ಎಷ್ಟೇ ಕಷ್ಟ, ಅವಮಾನ ಅನುಭವಿಸಿದರೂ ಜೀವನವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಡಿಪಾಗಿಟ್ಟರು. ಅದರಂತೆ ಇಂದಿನ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಬಸವರಾಜ, ಸದಸ್ಯರಾದ ಗೂಳಪ್ಪ ಮಾಳೆಕೊಪ್ಪ, ಅಲ್ಲಾಸಾಬ ನದಾಫ್, ಗುರುಮೂರ್ತಿ ಹಿರೇಮಠ, ಶಿಕ್ಷಕರಾದ ರವಿಕಿರಣ ಟಿಕಾರೆ, ರಾಜಾಸಾಬ ಬಳಿಗಾರ, ಮರ್ದಾನಲಿ ಗಡಾದ, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ಸುನೀತಾ ಯಾಳಗಿ, ಪರಶುರಾಮ ಯಡವಟ್ಟಿ ಇತರರಿದ್ದರು.